ನ್ಯೂಸ್

ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ: ಮಲ್ಲಿಕಾರ್ಜುನ

Bengaluru - Political - Vilas Melagiri

ಬೆಂಗಳೂರು: ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ. ಶಾಮನೂರು ಶಿವಶಂಕರಪ್ಪನವರನ್ನೇ ಕೇಳಿ ಎಂದು ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

ಸಿಎಂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅವರವರೇ ಮಾತನಾಡುತ್ತಾರೆ. ಅವರ ವೈಯಕ್ತಿಕ ವಿಚಾರ ಏನೂ ಎಂಬುದು ನನಗೆ ಗೊತ್ತಿಲ್ಲ. ತಂದೆಯವರ ಜತೆಗೆ ನಾನು ಮಾತನಾಡಿಲ್ಲ.

ದಾವಣಗೆರೆ ಜಿಲ್ಲಾಧಿಕಾರಿಯನ್ನು ಎಲ್ಲರನ್ನೂ ಬದಲಾವಣೆ ಮಾಡುವಂತೆಯೇ ಮಾಡಿದ್ದಾರೆ ಎಂದು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಸಿಎಂ ಸಿದ್ದರಾಮಯ್ಯ ಮತ್ತು ಶಿವಶಂಕರಪ್ಪನವರು ಇಬ್ಬರೂ ಕೂಡ ಹಿರಿಯರು. ಅವರೇ ಮಾತಾಡಿಕೊಳ್ಳುತ್ತಾರೆ. ಆ ವಿಚಾರ ಮುಗಿದು ಹೋದ ಅಧ್ಯಾಯ ಎಂದು ಮಲ್ಲಿಕಾರ್ಜುನ ತಿಳಿಸಿದರು.