ನ್ಯೂಸ್

ಎಲ್​ಐಸಿ ಐಪಿಒ ಇಂದು ಚಾಲನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ಬಹುನಿರೀತ ಆರಂಭಿಕ ಷೇರು ಮಾರಾಟ (ಐಪಿಒ) ಬುಧವಾರ ಚಾಲನೆಗೊಳ್ಳಲಿದೆ.

ಪ್ರತಿ ಷೇರಿಗೆ 902ರಿಂದ 949 ರೂಪಾಯಿ ನಿಗದಿ ಮಾಡಲಾಗಿದ್ದು, ಮೇ 9ರವರೆಗೂ ಷೇರು ಖರೀದಿಗೆ ಬಿಡ್​ ಮಾಡಬಹುದು. ಈ ಮಾರಾಟ ದಿಂದ 21 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಎಲ್​ಐಸಿ ಹೊಂದಿದೆ. ಉದ್ಯೋಗಿಗಳಿಗೆ 15.81 ಲಕ್ಷ ಷೇರು, ಪಾಲಿಸಿದಾರರಿಗೆ 2.21 ಕೋಟಿ ಷೇರನ್ನು ಮೀಸಲು ಇರಿಸಿದ್ದು, ನೌಕರರಿಗೆ 45 ರೂ. ಮತ್ತು ಪಾಲಿಸಿದಾರರಿಗೆ 60 ರೂ. ರಿಯಾಯಿತಿಯನ್ನು ಎಲ್​ಐಸಿ ಘೋಷಿಸಿದೆ.

ಎಲ್​ಐಸಿ ಷೇರು ಮೇ 17ರಂದು ಬಾಂಬೆ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ ಲಿಸ್ಟ್​ ಆಗುವ ಸಾಧ್ಯತೆ ಇದೆ. ಆಸಕ್ತರು ಕನಿಷ್ಠ 15 ಷೇರಿನ ಮೂಲಕ ಬಿಡ್​ ಮಾಡಬಹುದು (15 ಷೇರುಗಳ ಷೇರು ಗುಚ್ಛಕ್ಕೆ ಅಂದಾಜು 14,235 ರೂ.). 15ರ ಗುಣಕದಲ್ಲಿ ಷೇರುಗಳ ಗುಚ್ಛ ಖರೀದಿಸಲು ಅವಕಾಶ ಇದೆ.