ಮುಖ್ಯ ಮಂತ್ರಿಗಳಿಗೆ ಬರೆದ ಬೆಳೆ ನಷ್ಟ ಪತ್ರದೊಂದಿಗೆ ಬಿ. ಪಿ. ಚೇತನ್ 
ನ್ಯೂಸ್

ಬೆಳೆ ನಷ್ಟದ ಬಗ್ಗೆ ಸಿಎಂಗೆ ಪತ್ರ

ವಿರಾಜಪೇಟೆ : ಜಿಲ್ಲೆಯ ರೈತರ ಸಮಸ್ಯೆಗಳ ಕುರಿತು ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾನೆ.

ಮೂಲತಃ ನಾಪೋಕ್ಲುವಿನ ಕೊಳಕೇರಿಯವರಾದ ಹಾಗೂ ಪೊನ್ನಂಪೇಟೆಯ ಸಿಐಪಿಯುಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಿ.ಪಿ. ಚೇತನ್ ಪತ್ರ ಬರೆದಿದ್ದು, ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಫಿ ಬೆಳೆ ನಷ್ಟವಾಗಿದೆ. ಮಾತ್ರವಲ್ಲದೆ ಕಾಫಿ ಬೆಲೆ ಸಹ ತೀವ್ರ ಕುಸಿದಿದೆ. ಇದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದೆ. ರೈತರ ಬದುಕನ್ನು ಮರು ಸ್ಥಾಪಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಚೇತನ್ ಆಗ್ರಹಿಸಿದ್ದಾನೆ.