ಬಸವನಬಾಗೇವಾಡಿ: ಜನಸಂಖ್ಯೆ ಆದರದ ಮೇಲೆ ಒಳಮೀಸಲಾತಿ ಜಾರಿಗೆ ತರುತ್ತಿರುವ ರಾಜ್ಯಸರ್ಕಾರದ ಕ್ರಮ ವಿರೋಧಿಸಿ ಬಂಜಾರಾ ಸಮಾಜದ ಪ್ರಮುಖರು ಪಟ್ಟಣದಲ್ಲಿ ಗುರುವಾರ ಪತ್ರ ಚಳವಳಿ ಹಮ್ಮಿಕೊಂಡಿದ್ದರು.
ನಂತರ ಮಾತನಾಡಿದ ಕರ್ನಾಟಕ ಪ್ರದೇಶ ಬಂಜಾರ ಸಮಾಜದ ಜಿಲ್ಲಾದ ಡಾ.ಬಸವರಾಜ ಚವ್ಹಾಣ, ನ್ಯಾ.ನಾಗಮೋಹನ್ ದಾಸ ಅವರು 2011ರ ಜನಸಂಖ್ಯೆ ಪರಿಗಣಿಸದೆ, ಕೇಂದ್ರ ಸರ್ಕಾರ ನಡೆಸಲಿರುವ 2025 ರ ಜನಗಣತಿ ಪರಿಗಣಿಸಬೇಕು. ಆಗ ಮಾತ್ರ ಎಲ್ಲರಿಗೂ ನ್ಯಾಯಸಿಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಎಲ್ಲೋ ಕುಳಿತು, ಯಾರೋ ಹೇಳಿದಂತೆ ವರದಿ ಸಿದ್ಧಪಡಿಸಬಾರದು, ಪ್ರತಿ ತಾಂಡಾಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಅರಿತು ಸಮಗ್ರ ವರದಿ
ಸಿದ್ಧಪಡಿಸಬೇಕು. ಸುಪ್ರೀಂಕೋರ್ಟ್ ಕೂಡ ಇದನ್ನೇ ಹೇಳಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ, ಹರಿಲಾಲ್ ನಾಯಕ, ಕೃಷ್ಣ ನಾಯಕ, ಗುರಪ್ಪ ಲಮಾಣಿ, ಡಾ.ಅರವಿಂದ ಚವ್ಹಾಣ, ರವಿ ಲಮಾಣಿ, ಬಾಬು ಚವ್ಹಾಣ, ಶಾಂತಪ್ಪ ರಾಠೋಡ್, ವಿನೋದ ನಾಯಕ, ಪಿಂಟು ಚವ್ಹಾಣ, ಸುಭಾಷಚಂದ್ರ ರಾಠೋಡ, ರಾಜು ಲಮಾಣಿ, ಭೀಮು ಪವಾರ, ಆನಂದ ಲಮಾಣಿ, ಸುನಿಲ್ ನಾಯಕ, ವಿಜಯ್ ನಾಯಕ, ನಂಜುಂಡಿ ಚವ್ಹಾಣ, ಮೀಟು ಜಾಧವ, ಸಂತೋಷ ನಾಯಕ, ಕುಮಾರ್ ನಾಗಾವಾಡ, ರುಕ್ಮೀಣಿ ರಾಠೋಡ ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದರು