ನೂತನ ಜಿಲ್ಲಾ ನೋಂದಣಾಧಿಕಾರಿ ಡಂಬಾರ್ ಮತ್ತೂರ್ ಅವರನ್ನು ಶಿವಮೊಗ್ಗ ಜಿಲ್ಲಾ ಪತ್ರ ಬರಹಾರರ ಒಕ್ಕೂಟದ ಪದಾಧಿಕಾರಿಗಳು ಸನ್ಮಾನಿಸಿದರು. ಜಿ.ಎಂ.ಸುರೇಶ್ ಬಾಬು, ಶ್ರೀಧರ್ ದಿಕ್ಷಿತ್, ಶ್ರೀಧರ್ ಉಡುಪ, ಸತ್ಯ ನಾರಾಯಣ ಇದ್ದರು.  
ನ್ಯೂಸ್

ಮಧ್ಯವರ್ತಿಗಳ ಹಾವಳಿ ತಡೆಗೆ ಪತ್ರ ಬರಹಾರರ ಆಗ್ರಹ

ಶಿವಮೊಗ್ಗ: ಶಿವಮೊಗ್ಗದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯುವಂತೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಪತ್ರ ಬರಹಾರರ ಒಕ್ಕೂಟದ ಪದಾಧಿಕಾರಿಗಳು ಬುಧವಾರ ನೂತನ ಜಿಲ್ಲಾ ನೋಂದಣಾಧಿಕಾರಿಗೆ ಮನವಿ ಸಲ್ಲಿಸಿದರು.

ನೂತನವಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾ ನೋಂದಣಾಧಿಕಾರಿ ಡಂಬಾರ್ ಮತ್ತೂರ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿದ ಏಳು ತಾಲೂಕಿನ ಸಂಘದ ಪದಾಧಿಕಾರಿಗಳು, ವಿನೋಬನಗರ ಪೊಲೀಸ್ ಚೌಕಿಯಿಂದ ಸಾಗರ ರಸ್ತೆ ಎಪಿಎಂಸಿ ಕಟ್ಟಡಕ್ಕೆ ಉಪ ನೋಂದಣಾಧಿಕಾರಿ ಕಚೇರಿ ಇತ್ತೀಚೆಗೆ ಸ್ಥಳಾಂತರಗೊಂಡಿದೆ. ಆದರೆ ಅಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರುತ್ತಿದ್ದು, ಕಡಿವಾಣ ಹಾಕುವಂತೆ ಆಗ್ರಹಿಸಿದರು.

ಶಿವಮೊಗ್ಗ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಧಿಕೃತ ಪತ್ರ ಬರಹಗಾರರ ನಾಮಫಲಕ ಅಳವಡಿಸುವಂತೆ ಆದೇಶಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಸುರೇಶ್ ಬಾಬು, ಗೌರವ ಅಧ್ಯಕ್ಷ ಶ್ರೀಧರ್ ದಿಕ್ಷಿತ್, ಉಪಾಧ್ಯಕ್ಷರಾದ ಶ್ರೀಧರ್ ಉಡುಪ, ಸತ್ಯ ನಾರಾಯಣ (ಬಾಬಣ್ಣ) ಮತ್ತಿತರರು ಉಪಸ್ಥಿತರಿದ್ದರು.