ಲಾರದ ಡೂಂ ಲೈಟ್​ ವೃತ್ತದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ "ಐ ಲವ್​ ಆರ್​ಎಸ್​ಎಸ್​' ಅಭಿಯಾನಕ್ಕೆ ಚಾಲನೆ ನೀಡಿದರು. 
ನ್ಯೂಸ್

ಆರ್​ಎಸ್​ಎಸ್​ ಬಗ್ಗೆ ತಿಳಿದು ಮಾತನಾಡಲಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ಮಾಡುವ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳಲು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವವರು ಆರ್​ಎಸ್​ಎಸ್​ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಪತ್ರ ಬರೆದಿರುವುದು ಖಂಡನೀಯ. ಸಂಸ್ಥೆಯ ಇತಿಹಾಸ ತಿಳಿದು ಮಾತನಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ನಗರದ ಡೂಂ ಲೈಟ್​ ವೃತ್ತದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ "ಐ ಲವ್​ ಆರ್​ಎಸ್​ಎಸ್​' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಚೀನಾ-ಭಾರತ ಯುದ್ಧ, ಪ್ರಾಕೃತಿಕ ಅವಘಡದಲ್ಲಿ ಆರ್​ಎಸ್​ಎಸ್​ ಯಾವ ಕೆಲಸ ಮಾಡಿಕೊಂಡು ಬಂದಿದೆ ಎಂಬುದನ್ನು ಇತಿಹಾಸ ಓದಿ ಅರ್ಥಮಾಡಿಕೊಳ್ಳಲಿ ಎಂದು ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದರು.

ನಿಮ್ಮದೇ ಪಕ್ಷದಿಂದ ಪ್ರಧಾನಿಯಾಗಿದ್ದ ನೆಹರು ಅವರು ಗಣರಾಜ್ಯೋತ್ಸವ ಪರೇಡ್​ನಲ್ಲಿ ಆರ್​ಎಸ್​ಎಸ್​ಗೆ ಅವಕಾಶ ನೀಡಿ ಗೌರವಿಸಿದ್ದ ಇತಿಹಾಸ ಪುಟಗಳಲ್ಲಿ ಉಳಿದಿದೆ. ಓದಿ ತಿಳಿದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪಾಕ್​ಗೆ ಜಿಂದಾಬಾದ್​ ಎಂದವರನ್ನು ತಾಕತ್ತಿದ್ದರೆ ಬ್ಯಾನ್​ ಮಾಡಿ, ಅದು ಬಿಟ್ಟು ಲಕ್ಷಾಂತರ, ಕೋಟ್ಯಾಂತರ ಕಾರ್ಯಕರ್ತರನ್ನು ಹುಟ್ಟು ಹಾಕಿರುವ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಸಾಕಾರವಾಡಿರುವ ಆರ್​ಎಸ್​ಎಸ್​ ಅನ್ನು ನೀವು ಎಷ್ಟೇ ಜನ್ಮವೆತ್ತಿದರೂ ನಿಷೇಧ ಅಸಾಧ್ಯ ಎಂದು ಎಚ್ಚರಿಕೆ ನೀಡಿದರು.

ನರೇಂದ್ರ ಮೋದಿ, ಎಲ್​.ಕೆ.ಅಡ್ವಾಣಿ, ಜೆ.ಪಿ.ನಡ್ಡಾ, ಅಮಿತ್​ ಶಾ, ಯಡಿಯೂರಪ್ಪ ಸೇರಿ ಅನೇಕ ನಾಯಕರು ಆರ್​ಎಸ್​ಎಸ್​ನಿಂದ ಬಂದವರು. ಇವರನ್ನು ನೋಡಿಯಾದರೂ ಆರ್​ಎಸ್​ಎಸ್​ ಇತಿಹಾಸ ತಿಳಿಯಲಿಲ್ಲ ಎಂದು ಹೇಗೆ ಎಂದು ಪ್ರಶ್ನಿಸಿದರು.

ಅಂತಹ ಆರ್​ಎಸ್​ಎಸ್​ಅನ್ನು ನಿಲ್ಲಿಸಿದರೆ ಅದು 10 ಪಟ್ಟು ಹೆಚ್ಚಾಗುತ್ತದೆ. ಮನೆ, ವಾಹನಗಳ ಮೇಲೆ ಸ್ಟಿಕ್ಕರ್​ ಅಂಟಿಸುವ ಕಾರ್ಯಕ್ಕೂ ಚಾಲನೆ ನೀಡುತ್ತಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.

ಇದೇ ವೇಳೆ ವಾಹನಗಳಿಗೆ ಐ ಲವ್​ ಆರ್​ ಎಸ್​ ಎಸ್​ ಸ್ಟಿಕ್ಕರ್​ ಅಂಟಿಸಿ, ಘೋಷಣೆ ಕೂಗಲಾಯಿತು. ಅಭಿಯಾನದ ಹಿನ್ನೆಲೆ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

ಮುಖಂಡರಾದ ವಿಜಯ್​ ಕುಮಾರ್​, ಅಪ್ಪಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಬಾಲಾಜಿ, ಮಹೇಶ್​, ಹಾರೋಹಳ್ಳಿ ವೆಂಕಟೇಶ್​, ನಾಮಾಲ್​ ಮಂಜು, ಸಾ.ಮಾ.ಬಾಬು, ಅರುಣಮ್ಮ, ರತ್ನಮ್ಮ, ಮಂಜುಳಾದೇವಿ, ವಿಜಯಲಕ್ಷಿ$್ಮ, ಮಂಜುನಾಥ್​, ಸಾಮಾ ಪ್ರಸನ್ನ, ಸಾಯಿಮೌಳಿ ಇದ್ದರು.