ಕೋಲಾರ: ನಿಖಿಲ್ ಇನ್ನು ರಾಜಕೀಯಕ್ಕೆ ಹೊಸಬ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಹೆಸರು ಹೇಳಿಕೊಂಡು ಈಗೀಗ ಪ್ರವೇಶ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಇಲ್ಲಿಯ ವರೆಗೂ ರಾಜಕೀಯ ಸಾಧನೆ ಮಾಡಿದ್ದೇವೆ. ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಗೊತ್ತಿದ್ದು, ಕೇಳಿ ತಿಳಿದುಕೊಳ್ಳಲಿ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಕೊಮ್ಮನಹಳ್ಳಿ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ಗಾಗಿ ದುಡಿದವರಿಗೆ ಯಾರಿಗೂ ನ್ಯಾಯ ಸಿಕ್ಕಿಲ್ಲ, ಮಾಲೂರಿನಲ್ಲಿ ಹಿಂದೆ ಜೆಡಿಎಸ್ ಕಟ್ಟಿದವರು ಯಾರು ಎಂದು ಇತಿಹಾಸ ತಿಳಿಯಿರಿ ಎಂದು ತಿಳಿಸಿದರು.
ಜೆಡಿಎಸ್ನಿಂದ ಕೋಮುಲ್ ನಿರ್ದೇಶಕರಾಗಿ, ಜಿಪಂ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯಿಂದ ಹೇಳಿಕೆ ನೀಡಿದ್ದಾರೆ. ನಾನು ಮೂಲತ@ ಕಾಂಗ್ರೆಸ್ ಪಕ್ಷದವರು. ದ್ಯಾವಿರಪ್ಪ ಅವರು ಶಾಸಕರಾದ ಮೇಲೆ ಜೆಡಿಎಸ್ ಕಾರ್ಯಕರ್ತರು ಇರಲಿಲ್ಲ. ಮತದಾರರು ಇದಿದ್ದು 1,500 ಮತಗಳಿಂದ 25 ಸಾವಿರ ಮತ ಕೊಡಿಸುವ ಪ್ರಯತ್ನ ಮಾಡಿದೇವು. ಇಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಹಿಂದೆ ಜೆಡಿಎಸ್ನಿಂದ ಜಿಪಂ ಚುನಾವಣೆಗೆ ಸ್ಪರ್ಧೆ ಮಾಡಲು ಯಾರೂ ಮುಂದೆ ಬರಲಿಲ್ಲ. ಆಗ ನನ್ನ ಶ್ರೀಮತಿ ರತ್ನಮ್ಮ ಅವರನ್ನು ಕಣಕ್ಕೆ ಇಳಿಸಿ, ಸ್ವಂತ ವರ್ಚಸ್ಸಿನ ಮೇರೆಗೆ ಗೆದ್ದು ಸಾಧನೆ ತೋರಿಸಿದೇವು. ಆ ಸಂದರ್ಭದಲ್ಲಿ ಮಾಲೂರು ಕ್ಷೇತ್ರದಿಂದ ಶಾಸಕನನ್ನು ಗೆಲ್ಲಿಸಿಕೊಂಡು ಬರುವುದಾಗಿ ಕುಮಾರಣ್ಣ ಅವರಿಗೆ ಮಾತು ಕೊಟ್ಟೆ, ಆಗ ಮಂಜುನಾಥ್ ಗೌಡರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡೇವು, ಇದು ಇತಿಹಾಸ ಎಂದು ತಿಳಿಸಿದರು.
ಇದಾದ ನಂತರ ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಿಂದ ಟಿಕೆಟ್ ಕೇಳಿದಾಗ ಮಾತು ತಪ್ಪಿ, ಮನೋಹರ್ ಅವರಿಗೆ ಕೊಡುತ್ತಾರೆ. ಆಗ ನಾನು ಸಹ ನಾಮಪತ್ರ ಸಲ್ಲಿಸಿದ್ದೇ. ಆಗ ಕೊಮ್ಮನಹಳ್ಳಿ ಮನೆಗೆ ಬಂದು ಉಮೇದುವಾರಿಕೆ ಪಾಪಸ್ ತೆಗೆದೆ. ಇದರಿಂದ ಒಂದು ಸ್ಥಾನ ಗೆಲ್ಲಲು ಅವಕಾಶ ಸಿಕ್ಕಿತು, ಇದರ ಬಗ್ಗೆ ನಿಮಗೆ ತಿಳಿದಿದಿಯೇ ಎಂದು ಪ್ರಶ್ನಿಸಿದರು.