ಬೆಟ್ಟದಪುರ: ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಮತ್ತಷ್ಟು ಕಟ್ಟುವ ಮೂಲಕ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ ಎಂದು ಚಪ್ಪರದಹಳ್ಳಿ ಕಸಾಪ ಗ್ರಾಮಘಟಕ ಅಧ್ಯಕ್ಷ ಮುಕುಂದಾಚಾರಿ ಹೇಳಿದರು.
ಬೆಟ್ಟದಪುರ ಸಮೀಪದ ಚಪರದಹಳ್ಳಿ ಗ್ರಾಮದ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮಘಟಕ ಹಾಗೂ ಗ್ರಾಮಸ್ಥರ ವತಿಯಿಂದ ಶುಕ್ರವಾರ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು ಸ್ಮರಿಸುವ ಮೂಲಕ ಅವರು ಹಾಕಿಕೊಟ್ಟ ಆದರ್ಶವನ್ನು ಪಾಲಿಸಬೇಕು. ಕನ್ನಡ ಭಾಷೆಯನ್ನು ಮತ್ತಷ್ಟು ಬೆಳೆಸುವುದಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ್ ಪಟೇಲ್ ಮಾತನಾಡಿ ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ಎಲ್ಲೆಡೆ ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ನಿತ್ಯೋತ್ಸವ ಆಗಲಿ. ನಮ್ಮ ಭಾಷೆ, ನೆಲ, ಜಲ ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರ ಜನ್ಮಸಿದ್ಧ ಹಕ್ಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಕೆ ವೆಂಕಟೇಶ್, ಸಿ.ಪಿ ಸುರೇಶ್, ಗ್ಯಾರಂಟಿ ಯೋಜನೆಯ ಅನುಷ್ಠಾನ ತಾ.ಸಮಿತಿ ಸದಸ್ಯ ಸಿ.ಜೆ ರವಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎ ನಂದೀಶ್, ಮುಖಂಡರಾದ ಕಾಳೆಗೌಡ, ರಾಜೇಗೌಡ, ಸಂಜೀವೆಗೌಡ, ಸಿ.ಆರ್ ಆಂಜನಿಗೌಡ, ಸಿ.ಜೆ ಚಂದ್ರೇಗೌಡ, ರಮೇಶ್, ಜಗದೀಶ್, ರಾಜೇಗೌಡ, ರಾಮಚಂದ್ರ, ಶಿವನಂಜೇಗೌಡ, ರಾಮೇಗೌಡ, ಸಿ.ಎ ಕೀರ್ತಿ, ಶ್ರೀನಿವಾಸ, ಸಿ.ಪಿ ರಘು, ಶಿವಮೂರ್ತಿಚಾರಿ, ಚನ್ನಯ್ಯ, ನಂಜುಂಡಾಚಾರಿ, ಮಂಜುನಾಥ್, ನಾಗೇಂದ್ರ, ರಾಜೀವ್, ಶಿವಣ್ಣೆಗೌಡ, ಸುರೇಶ, ರವಿ, ಗುರುವಣ್ಣ, ನಾಗರಾಜು, ಚಿನ್ನಸ್ವಾಮಿಚಾರಿ, ಬಿಲ್ ಕಲೆಕ್ಟರ್ ರಮಣಯ್ಯ, ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.