ನ್ಯೂಸ್

ವಿಜ್ಞಾನ ಬಳಸಿಕೊಳ್ಳುವ ಮನಸ್ಥಿತಿ ನಮ್ಮದಾಗಲಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ವಿಜ್ಞಾನದಲ್ಲಿ ಸಾಕಷ್ಟು ಅನ್ವೇಷಣೆಗಳಾಗುತ್ತಿವೆ. ನಮ್ಮ ಮನೆ-ಮನಗಳಿಗೆ ವಿಜ್ಞಾನವೇ ಬರುತ್ತಿದೆ. ಅದನ್ನು ಬಳಸಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕೆಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರು ಡಾ.ಹುಲಿಕಲ್ ನಟರಾಜ್ ಹೇಳಿದರು.

ಸೋಮವಾರ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮಲ್ಲಿನ ಭಯ, ಆತಂಕ, ದುಗುಡ, ದುರಾಸೆಯಿಂದ ವಿಜ್ಞಾನ ನಮ್ಮಿಂದ ದೂರವಾಗುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಅಭಿವೃದ್ದಿಯೆಡೆ ಹೆಜ್ಜೆ ಹಾಕಬೇಕು ಎಂದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಆರ್.ಅಜ್ಜಯ್ಯ ಮಾತನಾಡಿ, ಅನ್ವೇಷಣೆಗಳನ್ನು ಸಂಭ್ರಮಿಸುತ್ತಾ ಯುವಜನತೆಯಲ್ಲಿ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಪ್ರೇರೇಪಣೆ ನೀಡುವ ಇಂತಹ ಕಾರ್ಯಕ್ರಮ ಶ್ಲಾಘನೀಯ. 2047ರ ವೇಳೆಗೆ ನಮ್ಮ ದೇಶ ಅಭಿವೃದ್ಧಿ ಹೊಂದಬೇಕಾದರೆ ಇಂತಹ ಕಾರ್ಯಕ್ರಮಗಳು ಬಹುಮುಖ್ಯ ಎಂದು ಹೇಳಿದರು.

ಎಸ್‌ಎಎಸ್‌ಟಿಆರ್‌ಎ ಅಧ್ಯಕ್ಷ ಡಾ.ಓಂಕಾರ್ ನಾಯ್ಕ, ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ, ವಿವಿ ಆಡಳಿತ ಮಂಡಳಿ ಸದಸ್ಯರಾದ ಡಾ.ಕೆ.ಪಿ.ಬಸವರಾಜ್, ಡಾ.ಕುಮಾರಸ್ವಾಮಿ, ದೇವಿಕುಮಾರ್, ಶಶಾಂಕ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಮುಂತಾದವರು ಉಪಸ್ಥಿತರಿದ್ದರು.