ಯರಗಟ್ಟಿ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಿ ಧಾರ್ಮಿಕ ನಂಬಿಕೆಗಳಿಗೆ ಭಂಗ ತರುವ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಪರ ನಂಬಿಕೆಯುಳ್ಳ ಜನರು ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಎಂ.ವಿ. ಗುಂಗಪ್ಪಗೋಳಗೆ ಮನವಿ ಸಲ್ಲಿಸಿದರು.
ಹೋಟೆಲ್ ಉದ್ಯಮಿಗಳಾದ ರತ್ನಾಕರ ಶೆಟ್ಟಿ, ರಾಜೇಶ ಶೆಟ್ಟಿ ಮಾತನಾಡಿ, ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಅನಾಮಿಕ ವ್ಯಕ್ತಿಗಳನ್ನು ಬಳಸಿ ಕೆಲ ಅಧರ್ಮಿಗಳು ಕುತಂತ್ರ ನಡೆಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ಸೇರಿ ಹತ್ತಾರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದ ಹೆಸರು ಹಾಳು ಮಾಡುವವರಿಗೆ ತಕ್ಕ ಶಿಕ್ಷಯಾಗಬೇಕು ಎಂದು ಆಗ್ರಹಿಸಿದ ಅವರು, ಆ. 13ರಂದು ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಮಂಜುಳಾ ಕುಂಬಾರಗೇರಿಮಠ, ಸೋಮಶೇಖರ ಮಗದುಮ್ಮ ಮಾತನಾಡಿ, ಆರೋಗ್ಯ, ಸರ್ಕಾರಿ ಶಾಲೆ, ದೇವಸ್ಥಾನಗಳ ಜೀಣೋರ್ದ್ಧಾರ, ಸ್ಮಶಾನಗಳ ಅಭಿವದ್ಧಿ, ಹೆನುಗಾರಿಕೆಗೆ ಧರ್ಮಸ್ಥಳ ಸಂಸ್ಥೆ ಉತ್ತಮ ಕೊಡುಗೆ ನೀಡುತ್ತಿದ್ದು, ಅದನ್ನು ಸಹಿಸದವರಿಗೆ ಮಂಜುನಾಥ ಸ್ವಾಮಿಯೇ ಶಿೆ ನೀಡುತ್ತಾನೆ ಎಂದರು.
ಈರಣಗೌಡ ಪಾಟೀಲ, ಸುಭಾಸ ಹನಸಿ, ಕುಮಾರ ಹಿರೇಮಠ, ಭಾಸ್ಕರ ಹಿರೇಮೆತ್ರಿ, ಸುಧಾಕರ ಶೆಟ್ಟಿ, ಕಿಟ್ಟು ತೊರಗಲ್, ವೆಂಕಣ್ಣ ಹುರಕನವರ, ಸೋಮು ರೆನಾಪೂರ, ಆನಂದ ಬಾಗೋಡಿ, ಚಂದ್ರಶೇಖರ ಸವದತ್ತಿ, ನಾಗಪ್ಪ ಪುಂಜಿ, ಅಶೋಕ ಕುಗೋಡ, ಸೋಮನಿಂಗ ಪೋತದಾರ, ಬಸವ್ವ ದಳವಾಯಿ, ಶಾಂತವ್ವ ಭಜಂತ್ರಿ, ನೂರಜಾನ್ ಮುಲ್ತಾನಿ, ಯಮುನಾ ಶಿದ್ನಾಳ, ಶಿಲ್ಪಾ ಕೊಳವಿ, ಪುಷ್ಪಾ ಹುಂಡೇಕರ, ಬಾಳವ್ವ ಗೌಡರ, ಸುರೇಶ ಹಟ್ಟಿ, ಈಶ್ವರ ಕರಿಕಟ್ಟಿ, ಪಂಚವ್ವ ಮೇಟಿ ಇತರರಿದ್ದರು.