ಅಥಣಿ ಗ್ರಾಮೀಣ: ಮನಶಾಂತಿಯಿಲ್ಲದ ಸಂಪತ್ತು, ಆರೋಗ್ಯವಿಲ್ಲದ ಶರೀರ, ಜ್ಞಾನವಿಲ್ಲದ ಜೀವನ ವ್ಯರ್ಥ ಎಂದು ಹಂಚಿನಾಳ ಭಕ್ತಿಯೋಗಶ್ರಮದ ಮಹೇಶಾನಂದ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಸದಾಶಿವ ಅಜ್ಜನವರ ಜಾತ್ರಾಮಹೋತ್ಸವ ಹಾಗೂ ರಥೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಇಂದು ಮನುಷ್ಯ ಹಣ, ಆಸ್ತಿಗೆ ಬೆಲೆ ಕೊಟ್ಟು ಪ್ರೀತಿ, ವಾತ್ಸಲ್ಯ ಕಳೆದುಕೊಳ್ಳುತ್ತಿರುವುದು ವಿಷಾಧನೀಯ. ಧರ್ಮ ಕಾರ್ಯಗಳಲ್ಲಿ ಪಾಲ್ಗೊಂಡು ಗುರು ಹಿರಿಯರ ಮಾತು, ಸತ್ಸಂಗ, ಪ್ರವಚನಗಳನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.
ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಗುಮಟಿ ಮಾತನಾಡಿದರು. ಕೃಷ್ಣಾಸಕ್ಕರೆ ಕಾರ್ಖಾನೆ ನಿರ್ದೇಶಕ ಶಾಂತಿನಾಥ ನಂದೇಶ್ವರ, ಸತ್ತೆಪ್ಪ ಬಾಗೆಣ್ಣವರ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಕಾಂಬಳೆ, ಅಣ್ಣಸಾಹೇಬ ಪಾಟೀಲ, ಗುರಪ್ಪ ತೇಲಿ, ನೇಮಣ್ಣ ಬಸನಗೌಡ, ಅಣ್ಣಪ್ಪ ಕಾತ್ರಾಳ, ಕುಮಾರ ಸಕಲಕನವರ, ಪುಟ್ಟು ಗುಮಟಿ, ಶ್ರೀಕಾಂತ ನಂದೇಶ್ವರ, ಮಲ್ಲಪ್ಪ ನಿಲಜಗಿ, ಜ್ಯೋತಿಭಾ ಕೋರೆ, ಲಕ್ಷ್ಮಣ ಶಿಂಧೆ, ಪ್ರಕಾಶ ಮಾಳಿ ಇತರರಿದ್ದರು.