ತ್ಯಾಗರ್ತಿ: ಸಮಾಜದ ಏಳಿಗೆಗೆ ಯುವಕರು ಸಂಘಟಿತರಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಸಮೀಪದ ಚಿಕ್ಕಬಿಲಗುಂಜಿಯಲ್ಲಿ ತಾಲೂಕು ಒಕ್ಕಲಿಗರ ಸಂಘ ಹಾಗೂ ಕೆಂಪೇಗೌಡ ಒಕ್ಕಲಿಗರ ಯುವ ವೇದಿಕೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿದರು ಯುವಕರು ದುಶ್ಚಟಗಳಿಂದ ದೂರವಿದ್ದು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಒಕ್ಕಲಿಗ ಸಂಘದ ತಾಲೂಕು ಉಪಾಧ್ಯಕ್ಷ ಮಂಜುನಾಥ ಗೌಡ, ಯುವ ವೇದಿಕೆ ಅಧ್ಯಕ್ಷ ನವೀನ್‌ಕುಮಾರ್, ಪ್ರಮುಖರಾದ ಚೇತನ್‌ರಾಜ್ ಕಣ್ಣೂರು, ಹಿರೇಬಿಲಗುಂಜಿ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಖಂಡೋಜಿ, ಕೃಷ್ಣಮೂರ್ತಿ, ರಮೇಶ್, ಆರ್.ರವಿ, ಎಂ.ದಿನೇಶ್ ಇತರರಿದ್ದರು. ಮಹೇಶ್ ಕಲ್ಮನೆ ತಂಡ ಪ್ರಥಮ, ಶಿವು ಚಿಕ್ಕಬಿಲಗುಂಜಿ ತಂಡ ದ್ವಿತೀಯ ಸ್ಥಾನ ಪಡೆದವು. ಕಾರ್ತಿಕ ಸರಣಿ ಶ್ರೇಷ್ಠ, ಸಂಪತ್ ಬೆಸ್ಟ್ ಬ್ಯಾಟರ್, ಗಗನ್ ಬೆಸ್ಟ್ ಬೌಲರ್, ಸುಮನ್ ಬೆಸ್ಟ್ ಫೀಲ್ಡರ್, ಅರುಣ್ ಬೆಸ್ಟ್ ಕೀಪರ್ ಪ್ರಶಸ್ತಿ ಪಡೆದರು.