ನೀಚಡಿಯಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಸಹಕಾರಿ ಪ್ರಶಸ್ತಿ ಪುರಸ್ಕೃತ ಗಣಪತಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಇಂದೂಧರ ಗೌಡ, ಪನ್ನಗ, ನಾರಾಯಣಮೂರ್ತಿ ಇದ್ದರು.  
ನ್ಯೂಸ್

ಗ್ರಾಮಾಭಿವೃದ್ಧಿಗೆ ಯುವಕರು ಸಂಘಟಿತರಾಗಲಿ

ತ್ಯಾಗರ್ತಿ: ಗ್ರಾಮದ ಯುವಕರು ಸಂಘಟಿತರಾಗಿ ಊರಿನ ಕುಂದುಕೊರತೆಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳ ಗಮನಸೆಳೆಯಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಮೀಪದ ನೀಚಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶನಿವಾರ ಚಿಂತನ ಯುವಕ ಸಂಘದಿಂದ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಊರಿನ ಅಭಿವೃದ್ಧಿ ಬಗ್ಗೆ ಯಾವುದೇ ಬೇಡಿಕೆ ಇದ್ದರೂ ಈಡೇರಿಸಲು ಸಿದ್ಧ. ತಾಲೂಕಿನಲ್ಲಿ ಈ ಹಿಂದೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮತ್ತೆ ಜೀವ ತುಂಬುವ ಕೆಲಸ ಆಗಬೇಕಿದೆ ಎಂದರು.

ರೈತರಿಗೆ ಹತ್ತಿರವಾಗಿರುವ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುವುದು ಉತ್ತಮ ಕಾರ್ಯ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಅದರ ಮೂಲಕ ಸ್ಥಳೀಯ ಸಹಕಾರ ಸಂಘಗಳಿಂದ ರೈತರಿಗೆ ಹೆಚ್ಚಿನ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಆಪ್ಸ್‌ಕೋಸ್ ಅಧ್ಯಕ್ಷ ಇಂದೂಧರ ಗೌಡ ಮಾತನಾಡಿ, ಸಾಗರದಲ್ಲಿ ಅಡಕೆ ಮಾರಾಟ ಸಂಸ್ಥೆ ಆಪ್ಸ್‌ಕೋಸ್ ಬೆಳೆಸಲು ರೈತರ ಕೊಡುಗೆಯನ್ನು ಸ್ಮರಿಸಿದರು. ಜಿಲ್ಲಾ ಅತ್ಯುತ್ತಮ ಸಹಕಾರ ಪ್ರಶಸ್ತಿ ಪುರಸ್ಕೃತ ನೀಚಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಕೆಳಗಿನಮನೆ ಅವರನ್ನು ಸನ್ಮಾನಿಸಲಾಯಿತು.

ಯುವಕ ಸಂಘದ ಅಧ್ಯಕ್ಷ ಪನ್ನಗ, ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣಮೂರ್ತಿ, ಪ್ರಮುಖರಾದ ಬಿ.ಜಿ.ಅನಂತಮೂರ್ತಿ, ಎನ್.ಟಿ.ಶ್ರೀಧರ, ರಾಜೇಂದ್ರ, ಪ್ರಶಾಂತ್ ಜೋಯ್ಸ, ಅಕ್ಷಯ್, ವೆಂಕಟೇಶ್ ಇತರರಿದ್ದರು.