ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಗೀತಾ ಸುರೇಶ್, ರುಕ್ಮಿಣಿ ಸುರೇಶ್, ದೇವರಾಜ್, ಗೀತಾ ಇದ್ದರು. 
ನ್ಯೂಸ್

ನೆಲ, ಜಲ ಉಳಿಸುವ ಕೆಲಸವಾಗಲಿ

ಹನಗೋಡು: ಹೋಬಳಿಯ ನೇರಳಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಗೀತಾ ಸುರೇಶ್ ಮಾತನಾಡಿ, ನಮ್ಮ ನೆಲ, ಜಲ, ಭಾಷೆ ಉಳಿಸುವ ಕೆಲಸವಾಗಬೇಕು. ಕನ್ನಡ ನಾಡು ನಮಗೆ ಜನ್ಮ ಕೊಟ್ಟ ತಾಯಿಗೆ ಸಮಾನ. ತಾಯಿಗೆ ಕೊಡುವ ಗೌರವವನ್ನು ತಾಯ್ನಡಿಗೂ ಕೊಡಬೇಕು ಎಂದರು.

ಉಪಾಧ್ಯಕ್ಷೆ ರುಕ್ಮಿಣಿ ಸುರೇಶ್, ಪಿಡಿಒ ದೇವರಾಜ್, ಕಾರ್ಯದರ್ಶಿ ಗೀತಾ, ಸದಸ್ಯರಾದ ಜವರಮ್ಮ, ನಾಣ್ಯಕುಮಾರಿ, ಅಮಾಸೇಗೌಡ, ಮಂಜುನಾಥ್, ನಟೇಶ್ ಗ್ರಂಥಪಾಲಕ ಗಣೇಶ್ ಇದ್ದರು.