ವಿಜಯವಾಣಿಸುದ್ದಿಜಾಲ ಸವಣೂರ
ಗೋವಿನ ಜೋಳದರ ನಿಗದಿ ಹಾಗೂ ಖರೀದಿ ಕೇಂದ್ರತೆರೆಯಲು ಒತ್ತಾಯಿಸಿ ಕರ್ನಾಟಕರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಹಾಗೂ ವಿವಿಧ ರೈತ ಸಂಘಟನೆಗಳನೇತೃತ್ವದಲ್ಲಿ ಗುರುವಾರ ರೈತರುಪಟ್ಟಣದ ಕಂದಾಯ ಇಲಾಖೆ ಕಚೇರಿಎದುರು ಪ್ರತಿಭಟನೆ ನಡೆಸಿತಹಸೀಲ್ದಾರ್ ರವಿಕುಮಾರ ಅವರಿಗೆಮನವಿ ಸಲ್ಲಿಸಿದರು.
ಅತಿವೃಷ್ಟಿಯಿಂದರೈತರು ಕಂಗಾಲಾಗಿದ್ದಾರೆ.ಅಲ್ಪಸ್ವಲ್ಪ ಜಮೀನಿನಲ್ಲಿಬೆಳೆದಿದ್ದ ಗೋವಿನ ಜೋಳ ಕೂಡಹಾಳಾಗಿದೆ. ದರ ಸಹಿತ1500 ರೂ. ರಿಂದ1800 ರೂ. ಇದೆ.ಕಳೆದ ವರ್ಷ ಪ್ರತಿಕ್ವಿಂಟಾಲ್ ಮೆಕ್ಕೆಜೋಳಕ್ಕೆ2400 ರೂ. ರಿಂದ2800 ರೂ. ಬೆಲೆಸಿಕ್ಕಿತ್ತು. ಆದರೆ,ಈ ವರ್ಷ ಬೆಲೆ ಇಲ್ಲದೇಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ.ಇಂತಹ ಸಮಯದಲ್ಲಿ ಸರ್ಕಾರಪ್ರತಿ ತಾಲೂಕಿನಲ್ಲಿ ಖರೀದಿಕೇಂದ್ರ ಪ್ರಾರಂಭಿಸಿ, 2400ರೂ.ನಿಗದಿಪಡಿಸಿ, ಪ್ರೋತ್ಸಾಹಧನ 600 ರೂ.ಗಳನ್ನುಸೇರಿಸಿ ಒಟ್ಟು 3000 ರೂ.ನೀಡಬೇಕು. ನ.24ರಒಳಗಾಗಿ ಸಮಸ್ಯೆ ಬಗೆಹರಿಸದಿದ್ದರೆರಸ್ತೆ ತಡೆ ನಡೆಸಬೇಕಾಗುತ್ತದೆಎಂದು ಎಚ್ಚರಿಕೆ ನೀಡಿದರು.
ರೈತ ಸಂಘದತಾಲೂಕಾಧ್ಯಕ್ಷ ಚನ್ನಪ್ಪ ಮರಡೂರ,ಪ್ರಮುಖರಾದ ಬಾಬು ಪರಾಶ,ಸಂಗಮೇಶ ಪೀತಾಂಭ್ರಶೆಟ್ಟಿ,ಅಬ್ದುಲ್ ಬುಡಂದಿ,ಶಿವಯೋಗಿ ಹೊಸಗೌಡ್ರ,ಚನ್ನಬಸಪ್ಪ ಬಾಗಲಕೋಟೆ,ಎಂ.ಎಸ್.ಬಾರಕೇರ, ಮಹಾಂತೇಶಪರಮ್ಮನವರ, ವೆಂಕಟೇಶಮಲ್ಲನಗೌಡ್ರ, ಆರ್.ಎಸ್.ಕೂಳೇನೂರ, ಶಿವಪ್ಪಅಂಗಡಿ, ಶೇಖಪ್ಪ ಹಡಪದಇತರರಿದ್ದರು.