ನ್ಯೂಸ್

ಹಾಲು ಉತ್ಪಾದಕರು ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ

ಬೆಟ್ಟದಪುರ: ಬೆಟ್ಟದಪುರ ಸಮೀಪದ ಅತ್ತಿಗೋಡು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಸೋಮವಾರ ವಾರ್ಷಿಕ ಮಹಾಸಭೆ ನಡೆಯಿತು.

ಮೈಮುಲ್ ವಿಸ್ತರಣಾಧಿಕಾರಿ ನಿಶ್ಚಿತ್ ಮಾತನಾಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಉತ್ಪಾದಕರು ಸದುಪಯೋಗಪಡಿಸಿಕೊಳ್ಳಬೇಕು. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರ ಸಹಕಾರ ಪ್ರಮುಖವಾಗಿದೆ ಎಂದರು.

ಸಭೆಯಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮೈಮುಲ್ ನಿರ್ದೇಶಕ ಬಿ.ಎ. ಪ್ರಕಾಶ್, ಸಂಘದ ಅಧ್ಯಕ್ಷೆ ಗೌರಿಜಯ, ಉಪಾಧ್ಯಕ್ಷೆ ಮಹದೇವಮ್ಮ, ನಿರ್ದೇಶಕರಾದ ಆರತಿ, ಡಿ.ವಿ ರಮ್ಯಾ, ಎಸ್.ಬಿ. ಸುಧಾ, ಮಣಿಯಮ್ಮ, ಸುಶೀಲಾ, ಕುಸುಮಾ, ಜಯಮ್ಮ, ಮಂಜುಳಾ, ಜಯಮ್ಮ, ಪಿ.ಬಸವನಹಳ್ಳಿ ಡೇರಿ ನಿರ್ದೇಶಕ ರಾಮಚಂದ್ರ, ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಆರ್.ಪವಿತ್ರಾ, ಸಿಬ್ಬಂದಿ ಲಕ್ಷ್ಮಮ್ಮ ಇದ್ದರು.