ಗೌರಿಬಿದನೂರು: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರಿಗೆ ಶಿೆಯಾಗುವಂತೆ ಮಾಡಬೇಕೆಂದು ಬಿಜೆಪಿಯ ಜಿಲ್ಲಾಟಕದ ಮಾಜಿ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ವಿವಿಧ ಹಿಂದು ಪರ ಸಂಟನೆಗಳಿಂದ ಹಮ್ಮಿಕೊಂಡಿದ್ದ ಧರ್ಮಯುದ್ಧ ಜಾಥಾದಲ್ಲಿ ಮಾತನಾಡಿದರು.
ಧರ್ಮಸ್ಥಳದವರ ಪ್ರಭಾವದಿಂದಾಗಿ ಇಡೀ ದಣ ಕನ್ನಡದಲ್ಲಿ ಹಿಂದುಗಳ ಮತಾಂತರವನ್ನು ಸಂಪೂರ್ಣವಾಗಿ ತಡೆಯಲಾಗಿದೆ, ಗ್ರಾಮಗಳಲ್ಲಿ ಮಧ್ಯದಂಗಡಿಗಳನ್ನು ಮುಚ್ಚಲಾಗುತ್ತಿದೆ.ಸಾವಿರಾರು ಕೆರೆಗಳನ್ನು ಧರ್ಮಸ್ಥಳ ಸಂದಿಂದ ಪುನಶ್ಚೇತನಗೊಳಿಸಲಾಗಿದೆ. ರಾಜ್ಯದ ಎಲ್ಲೆಡೆ ಪಾಳುಬಿದ್ದಿದ್ದ ಸಾವಿರಾರು ದೇವಸ್ಥಾನಗಳನ್ನು ಜೀಣೋರ್ದ್ಧಾರ ಮಾಡಲಾಗಿದೆ. ಧರ್ಮಸ್ಥಳದ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಸಹಿಸದ ಕೆಲ ಮತೀಯ ಶಕ್ತಿಗಳು ಹಲವಾರು ವರ್ಷಗಳಿಂದ ನಿರಂತರವಾಗಿ ಧರ್ಮಸ್ಥಳವನ್ನು ತೇಜೋವಧೆೆ ಮಾಡಲು ಪ್ರಯತ್ರ ನಡೆಸುತ್ತಲೆ ಬರುತ್ತಿದ್ದರೆ ಇವರ ವಿರುದ್ಧ ಪ್ರತಿಯೊಬ್ಬ ಹಿಂದು ಧ್ವನಿ ಎತ್ತಬೇಕು. ಈಗಾಗಲೆ ಇವರುಗಳ ಬುರುಡೆ ಪುರಾಣ ಜನರ ಮುಂದೆ ಬಟಾಬಯಲಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಇವರಿಗೆ ಶಿೆಯಾಗುವಂತೆ ಮಾಡಬೇಕು.
ಇಲ್ಲದಿದ್ದರೆ ಜನರೆ ದಂಗೆ ಎದ್ದು ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.
ಮುಖಂಡ ಡಾ.ಎಚ್.ಎಸ್.ಶಶಿಧರ್ ಮಾತನಾಡಿ, ಹಿಂದುಗಳ ಧಾರ್ಮಿಕ ಕೇಂದ್ರಗಳಾದ ಮಠ, ಮಂದಿರಗಳ ಮೇಲೆ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಇದರಿಂದಾಗಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತಿದೆ. ಇಂತಹ ಅಪಪ್ರಚಾರವನ್ನು ಇನ್ನಷ್ಟು ದಿನಗಳ ಕಾಲ ನಾವುಗಳು ಸಹಿಸಿಕೊಳ್ಳಬೇಕು. ಇದಕ್ಕೆಲ್ಲಾ ಉತ್ತರ ನೀಡುವ ಕಾಲ ಬಂದಿದೆ. ಪ್ರತಿಯೊಬ್ಬ ಹಿಂದು ಜಾಗೃತನಾಗಿ ಸಿಡಿದೇಳಬೇಕೆಂದು ಕರೆ ನೀಡಿದರು.ಧರ್ಮ ಯುದ್ಧದ ಜಾಥಾ ನಗರದ ಮರಿಗಮ್ಮ ದೇವಸ್ಥಾನದ ಆವರಣದಿಂದ ಪ್ರಾರಂಭವಾಗಿ ಬಿಎಚ್ ರಸ್ತೆ ,ಬಜಾರ್ ರಸ್ತೆ ಮೂಲಕ ಸಾಗಿ ಎಂಜಿ ವೃತ್ತದಲ್ಲಿ ಸಮಾರೋಪಗೊಂಡಿತು. ನಂತರ ನಗರಸಭೆ ಆಯುಕ್ತ ರಮೇಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.