ಸಾಲಿಗ್ರಾಮ: ಕೇಂದ್ರ ಸರ್ಕಾರದ ಯೋಜನೆ ನಬಾರ್ಡ್ ಮತ್ತು ವಿಕಾಸನ ಸಂಸ್ಥೆ ಸಹಯೋಗದೊಂದಿಗೆ ರೈತರ ಅಭಿವೃದ್ಧಿಗಾಗಿ ಸಾರ್ವಭೌಮ ರೈತ ಉತ್ಪಾದಕರ ಕಂಪನಿ ವತಿಯಿಂದ ಸಾಕಷ್ಟು ಯೋಜನೆಗಳನ್ನು ರೈತರಿಗೆ ನೀಡಲಾಗಿದ್ದು, ಇದನ್ನು ರೈತರು ಸದಪಯೋಗಪಡಿಸಿಕೊಳ್ಳಬೇಕು ಎಂದು ಸಾಲಿಗ್ರಾಮ ಸಾರ್ವಭೌಮ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಹೇಳಿದರು.
ಮೇಲೂರು ಗ್ರಾಮದಲ್ಲಿ ಭಾನುವಾರ ಸಂಘದ ವತಿಯಿಂದ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿ, ಸಂಸ್ಥೆಯಿಂದ ಹೆಚ್ಚು ಅನುದಾನ ತಂದು ರೈತರ ಅಭಿವೃದ್ಧಿಗೆ ಸಹಕರಿಸುವ ಗುರಿಹೊಂದಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರಾಗಬೇಕು ಎಂದು ಹೇಳಿದರು.
ವಿಕಾಸನ ಸಂಸ್ಥೆಯ ಮುಖ್ಯ ಸಂಯೋಜಕ ಕೆಂಪಯ್ಯ ಮಾತನಾಡಿ, ಈಗಾಗಲೇ ಮೇಲೂರು ಗ್ರಾಮದಲ್ಲಿ ಸಾರ್ವಭೌಮ ರೈತ ಉತ್ಪಾದಕರ ಕಂಪನಿಯಿಂದ ತೆರೆಯಲಾಗಿರುವ ಮಾರಾಟ ಕೇಂದ್ರದಲ್ಲಿ ರೈತರು ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಗೊಬ್ಬರ ಹಾಗೂ ಕೃಷಿ ಉಪಕರಣ, ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ವಿಕಸನ ಸಂಸ್ಥೆ ಮಂಡ್ಯ ಜಿಲ್ಲಾ ಕೇಂದ್ರ ಮತ್ತು ಕೃಷಿ ಇಲಾಖೆ ರೇಷ್ಮೆ ಇಲಾಖೆ ವಿವಿಧ ರೈತ ಸಂಘಟನೆಗಳ ಮುಖಂಡರು ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ್, ಮಂಡ್ಯ ವಿಕಾಸನ ಸಂಸ್ಥೆ ಅಧಿಕಾರಿ ಮಹೇಶ್, ಚಂದ್ರಗುರು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಾಲಿಗ್ರಾಮ ಮ್ಯಾನೇಜರ್ ಚೇತನ್ ಕುಮಾರ್, ತಾಲೂಕು ರೇಷ್ಮೆ ಇಲಾಖೆ ಅಧಿಕಾರಿ ಶಿವಮೂರ್ತಿ, ಲಕ್ಷ್ಮೀ ಜ್ಯೋತಿ, ನಿರ್ದೇಶಕ ಚನ್ನಕೇಶವ, ಅಶೋಕ್, ನಾಗರಾಜ್, ಹರೀಶ್, ಪುಟ್ಟೇಗೌಡ, ಅಭಿಜಿತ್, ವೆಂಕಟೇಶ್, ಮಂಗಳಾ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ರಶ್ಮಿ ಇತರರು ಇದ್ದರು.