ಕೆಳಕೊಪ್ಪ ಮತ್ತು ಕಾವಡಿ ಗ್ರಾಮದ ರೈತರಿಗೆ ಪ್ರೋತ್ಸಾಹ ಧನವನ್ನು ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ ವಿತರಿಸಿದರು. ಆದರ್ಶ್, ರಂಜಿತ್, ಪ್ರಮೋದ್ ಇದ್ದರು. 
ನ್ಯೂಸ್

ರೈತರು ಆರ್ಥಿಕ ಸಬಲರಾಗಲಿ

ಶೃಂಗೇರಿ: ರೈತರು, ಸೈನಿಕರು ಹಾಗೂ ವಿದ್ಯಾರ್ಥಿಗಳು ದೇಶದ ಅಮೂಲ್ಯ ಸಂಪತ್ತು. ಪ್ರಸ್ತುತ ಕೃಷಿ ಚಟುವಟಿಕೆಯಿಂದ ರೈತರು ಹಿಂದೆ ಸರಿಯುತ್ತಿದ್ದು ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ಹಂಚಲಿ ರಾಘವೇಂದ್ರ ತಿಳಿಸಿದರು.
ಗ್ರಾಮಭಾರತ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಗ್ರಾಪಂ ವ್ಯಾಪ್ತಿಯ ಕೆಳಕೊಪ್ಪ ಮತ್ತು ಕಾವಡಿ ಗ್ರಾಮದ ರೈತರಿಗೆ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.
ಪಾರಂಪರಿಕ ಮಣ್ಣಿನ ಸಂಸ್ಕೃತಿ ಮರಳಿ ಬರಬೇಕು. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ರೈತರಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು ಅನ್ನದಾತನಿಗೆ ಸಹಕಾರ ನೀಡುತ್ತಿದೆ. ಸವಲತ್ತುಗಳ ಸದ್ಬಳಕೆ ಮಾಡಿಕೊಂಡು ಕೃಷಿಕರು ಸಬಲರಾಗಬೇಕು ಎಂದರು.
ಗ್ರಾಮಭಾರತ್ ಟ್ರಸ್ಟ್ ಕಾರ್ಯದರ್ಶಿ ರಂಜಿತ್ ಮಾತನಾಡಿ, ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವತ್ತ ಗಮನ ಹರಿಸಬೇಕು. ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ಪೂರಕ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಗ್ರಾಮಭಾರತ್ ಟ್ರಸ್ಟ್ ಪದಾಧಿಕಾರಿ ಆದರ್ಶ ಕಾಂಚೀನಗರ, ಗ್ರಾಪಂ ಸದಸ್ಯರಾದ ಅಶ್ವಿನಿ, ಕೃಷ್ಣಮೂರ್ತಿ ಆಚಾರ್ ಇದ್ದರು. 50ಕ್ಕೂ ಹೆಚ್ಚು ಕೃಷಿಕರಿಗೆ ತಲಾ ಒಂದು ಸಾವಿರ ರೂ. ನೀಡಲಾಯಿತು.