ಹೊಳೆಹೊನ್ನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಗೆ ಹಿರಿಯ ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ ನೀಡಿದರು. ಹನುಮಮಂತ, ಆನಂದ, ಕೆ.ಆರ್.ಪರಿಮಳಾ, ಕಮಲಮ್ಮ, ರೂಪಾ ಇತರರಿದ್ದರು.  
ನ್ಯೂಸ್

ಶಾಲಾಭಿವೃದ್ಧಿಗೆ ಸಮುದಾಯ ಕೈಜೋಡಿಸಲಿ

ಹೊಳೆಹೊನ್ನೂರು: ಸರ್ಕಾರಿ ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಎಸ್.ಮಹಾಂತೇಶಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ 1983- 1990ರವರೆಗಿನ ಹಿರಿಯ ವಿದ್ಯಾರ್ಥಿಗಳ ಸಮಾಗಮ ಹಾಗೂ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಥಮಿಕ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಸರ್ಕಾರ ವಿವಿಧ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರುತ್ತಿದೆ. ಅದರ ಕಾರ್ಯಕ್ಷಮತೆ ಹೆಚ್ಚಾಗಲು ಹಿರಿಯ ವಿದ್ಯಾರ್ಥಿಗಳ ಹಾಗೂ ಸಮುದಾಯ ಸಹಭಾಗಿತ್ವ ಅತ್ಯವಶ್ಯಕ. ಅದರಂತೆ ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಶಾಲೆಯ ಪ್ರಗತಿಯಲ್ಲಿ ಕೈ ಜೋಡಿಸುತ್ತಿರುವುದು ಮತ್ತಷ್ಟು ಜನರಿಗೆ ಪ್ರೇರಣೆ ದೊರೆತಂತಾಗಿದೆ. ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಜೀವನದ ಮೌಲ್ಯ ಹೆಚ್ಚಿಸುತ್ತದೆ. ಅಲ್ಲದೆ ಆತ್ಮತೃಪ್ತಿ ಸಿಗುತ್ತದೆ ಎಂದರು.

ಸಹ ಶಿಕ್ಷಕಿಯರಾದ ಕೆ.ಆರ್.ಪರಿಮಳಾ, ಕಮಲಮ್ಮ, ರೂಪಾ, ಹಿರಿಯ ವಿದ್ಯಾರ್ಥಿಗಳಾದ ಎನ್.ಹನುಮಮಂತ, ಆನಂದ, ಎ.ಚಂದ್ರಿಕಾ, ಕೃಷ್ಣಪ್ಪ, ಎಂ.ಪಿ.ಕಿರಣ್‌ಕುಮಾರ್, ಜಗದೀಶ್, ಹನುಮಮ್ಮ, ಚೈತನ್ಯಾ, ಭಾರತಿ ಇತರರಿದ್ದರು.