Gavel on desk. Isolated with good copy space. Dramatic lighting. 
ನ್ಯೂಸ್

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯನ್ನು ಮರು ಪರಿಶೀಲಿಸಲಿ


ಪಂಜಾಬ್, ಹರಿಯಾಣದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ವರದಿ ಪಡೆಯಲು ಸುಪ್ರೀಂಕೋರ್ಟ್ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಈ ಸಮಿತಿ ಬಗ್ಗೆ ಮರು ಪರಿಶೀಲಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಪಂಜಾಬ್, ಹರಿಯಾಣದಲ್ಲಿ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆಗಳ ಪರಿಹಾರಕ್ಕೆ ಸುಪ್ರೀಂಕೋರ್ಟ್, ಅಲ್ಲಿನ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಐದು ಜನ ಪರಿಣಿತರನ್ನು ಸೇರಿಸಿ ಸಮಿತಿ ರಚಿಸಿದೆ. ಎಂಎಸ್‌ಪಿ ಗ್ಯಾರಂಟಿ ಕಾನೂನು ಆಗಬೇಕು ಎಂದು ದೇಶದ ರೈತರ ಪರವಾಗಿ ಅಲ್ಲಿನ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟವನ್ನು ಇಡೀ ದೇಶದ ರೈತರು ಬೆಂಬಲಿಸಿ ಮುಂದುವರಿಸಿದ್ದಾರೆ. ಈಗ ರಚಿಸಿರುವ ಸಮಿತಿ ಇಡೀ ದೇಶಕ್ಕೆ ಅನ್ವಯವಾಗುವಂತೆ ದಕ್ಷಿಣ ಭಾರತ ರಾಜ್ಯಗಳ ಪರಿಣಿತರನ್ನೂ ಸೇರಿಸಿ ಸಮಿತಿ ರಚಿಸಿ, ಈಗ ಹೊರಡಿಸಿರುವ ಆದೇಶ ಮರುಪರಿಶೀಲಿಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕುಲಾಂತರಿ ಬೀಜ (ಜಿಎಂ ಸೀಡ್ಸ್)ವನ್ನು ರೈತರ ಹಿತದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹಿಷ್ಕಾರ ಮಾಡಲಿ.