ಕಡೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶಾಸಕ ಕೆ.ಎಸ್.ಆನಂದ್ ಅವರನ್ನು ಸನ್ಮಾನಿಸಿದರು. ಪಾರ್ವತಮ್ಮ, ಭಾಗ್ಯಾ, ಶಾಹಿನಾ, ಮೀನಾಕ್ಷಿ ಇತರರಿದ್ದರು. 
ನ್ಯೂಸ್

ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ 6ನೇ ಗ್ಯಾರಂಟಿ ಈಡೇರಿಸಲಿ

ಕಡೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಕಳಪೆ ಮೊಬೈಲ್‌ಗಳನ್ನು ವಾಪಸ್ ಪಡೆದು ಹೊಸ ಮೊಬೈಲ್ ಕೊಡಿಸಲು ರಾಜ್ಯ ಸರ್ಕಾರದ ಜತೆ ಮಾತನಾಡಬೇಕು ಎಂದು ಒತ್ತಾಯಿಸಿ ತಾಲೂಕು ಎಐಟಿಯುಸಿ ಘಟಕದಿಂದ ಶಾಸಕ ಕೆ.ಎಸ್.ಆನಂದ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮತ್ತು ಗುಣಮಟ್ಟದ ಮೊಬೈಲ್‌ಗಳನ್ನು ಒದಗಿಸಿಕೊಡುವುದಾಗಿ ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಿದ್ದ 6ನೇ ಗ್ಯಾರಂಟಿ ಈಡೇರಿಸಲು ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ಭರವಸೆ ನೀಡಿದರು. ಎಐಟಿಯುಸಿ ತಾಲೂಕು ಅಧ್ಯಕ್ಷೆ ಯು.ಆರ್.ಪಾರ್ವತಮ್ಮ, ಪದಾಧಿಕಾರಿಗಳಾದ ಟಿ.ಎಸ್.ಭಾಗ್ಯಾ, ಶಾಹಿನಾ, ಮೀನಾಕ್ಷಿ, ಶೋಭಾ, ಶಿವಮ್ಮ, ಹೇಮಾ, ಆಶಾ, ಉಷಾ, ಕಾಂತಮಣಿ, ಗಿರಿಜಮ್ಮ, ಜಯಮ್ಮ, ಗೌರಮ್ಮ, ಓಂಕಾರಮ್ಮ, ಸುನಂದಾ, ಎ.ಬಿ.ಲಲಿತಾ, ಪಾರ್ವತಮ್ಮ ಇತರರಿದ್ದರು.