ಶಿರಾಳಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಸವರ್ ಸದಸ್ಯರ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಮಾತನಾಡಿದರು. ಬಿ.ಸಂಗಮೇಶ್ವರ, ಓಂಕಾರಪ್ಪ, ರಾಘವೇಂದ್ರ ಭಟ್ ಇತರರಿದ್ದರು. 
ನ್ಯೂಸ್

ಸದಸ್ಯರು ಹೆಚ್ಚಿನ ವಹಿವಾಟು ನಡೆಸಲಿ

ಸೋಮಶೇಖರ ಎನ್

ಶಿರಾಳಕೊಪ್ಪ: ಸಂಘ ಸದೃಢವಾಗಿ ಬೆಳೆಯುವಲ್ಲಿ ಸದಸ್ಯರ ಪಾತ್ರ ಪ್ರಮುಖ. ಸದಸ್ಯರು ಹೆಚ್ಚಿನ ವಹಿವಾಟು ನಡೆಸುವ ಮೂಲಕ ಸಂಘದ ಪ್ರಗತಿಗೆ ಸಹಕರಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಪಿ.ಚಂದ್ರಶೇಖರ ಹೇಳಿದರು.

ಶಿರಾಳಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಏರ್ಪಡಿಸಿದ್ದ ಸವರ್ಸದಸ್ಯರ ಸಭೆಯಲ್ಲಿ ಮಾತನಾಡಿ, ಶಿಕಾರಿಪುರ ತಾಲೂಕಿನಲ್ಲಿ 38 ಸಹಕಾರ ಸಂಘಗಳಿದ್ದು, ಅಧರ್ದಷ್ಟು ಸಂಘಗಳು ನಷ್ಟದಲ್ಲಿವೆ. ಸಂಘ ಲಾಭ ಗಳಿಸಬೇಕು ಎಂದರೆ ಸದಸ್ಯರು ಸಂಘದ ಮೇಲೆ ವಿಶ್ವಾಸವಿಟ್ಟು ಭಾಗವಹಿಸಬೇಕು ಎಂದು ತಿಳಿಸಿದರು.

ಸಂಘದ ಸಿಇಒ ಓಂಕಾರಪ್ಪ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘ 6.57 ಲಕ್ಷ ರೂ. ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು. ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಬಿ.ಸಂಗಮೇಶ್ವರ ಉದ್ಘಾಟಿಸಿದರು. ನಿರ್ದೇಶಕ ರಾಘವೇಂದ್ರ ಎಂ.ಭಟ್, ಮಲ್ಲಪ್ಪ ಗಡ್ನಳ್ಳಿ, ಹಿರಿಯ ಸದಸ್ಯ ಖಾಸಿಂ ಸಾಬ್, ಜಯಪ್ರಕಾಶ್ ಅವ್ವಾಜಿ, ಹಾಲೇಶಪ್ಪ ಸುರುಹೊನ್ನೆ, ಬಂಗೇರ, ಚಂದ್ರಪ್ಪ ವಾಲ್ಮೀಕಿ, ಹೊಳಿಯಪ್ಪ, ಯಶೋದಮ್ಮ, ನಟರಾಜ್ ಇತರರಿದ್ದರು.