ಹೊಸವರ್ಷಕ್ಕೆ ಏನು ನಿಮ್ಮ ರೆಸಲ್ಯೂಷನ್? ಹೊಸ ವರ್ಷಕ್ಕೆ ಒಂದು ಸಂಕಲ್ಪ ಮಾಡಿಕೊಂಡು ಅದರಂತೆ ದಿನಗಳನ್ನು ಕಳೆಯುವುದು ಈಗಿನ ಟ್ರೆಂಡ್. ಈ ನಿಟ್ಟಿನಲ್ಲಿ ನಮ್ಮ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಹಲ್ಲುಜ್ಜುವ ಕ್ರಮಗಳನ್ನು ಉತ್ತಮಗೊಳಿಸುವುದು ಅಥವಾ ಚಿಕಿತ್ಸೆ ಮುಂದೂಡದೆ ಪೂರ್ಣಗೊಳಿಸುವುದು... ಹೀಗೆ ದಂತ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವುದರಿಂದ ಕೇವಲ ಬಾಯಿಯ ಆರೊಗ್ಯವಲ್ಲದೆ ದೈಹಿಕ ಆರೋಗ್ಯವನ್ನೂ ಉತ್ತಮಗೊಳಿಸಿಕೊಳ್ಳಬಹುದು.
ಪ್ರತಿ ಆರು ತಿಂಗಳಿಗೊಮ್ಮೆಯಾದರು ವೈದ್ಯರನ್ನು ಕಂಡು ಓರಲ್ ಪ್ರಾಪಿಲ್ಯಾಕ್ಷಿಸ್ (oral prophylaxis) ಮಾಡಿಸಿಕೊಳ್ಳಬೇಕು.
ಶೇಕಡ 60ಕ್ಕಿಂತ ಹೆಚ್ಚಿನ ವಯಸ್ಕರು ಜಿಂಗೈವಿಟಿಸ್ನಿಂದ ಬಳಲುತ್ತಿದ್ದು ಇದು ವಸಡಿನ ಕಾಯಿಲೆಯ ಮೊದಲ ಹಂತವಾಗಿರುತ್ತದೆ. ಇದರಲ್ಲಿ ವಸಡಿನ ಭಾಗಕ್ಕೆ ಮಾತ್ರ ಹಾನಿಯುಂಟಾಗುತ್ತದೆ. ಬಾಯಿಯ ಶುಚಿತ್ವವನ್ನು ಸರಿಯಾಗಿ ನೋಡಿಕೊಳ್ಳದೆ ಪ್ಲಾಕ್ ಜಮೆ ಯಾಗುವುದು ರಿಂದ ಜಿಂಗೈವಿಟಿಸ್ ಉಂಟಾಗುತ್ತದೆ. ಬಾಯಿಯ ನೈರ್ಮಲ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು, ಪ್ಲಾಕ್ ಜಮೆಯಾಗುವುದನ್ನು ತಡೆಯುವುದು, ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವುದರಿಂದ ಅಥವಾ ನಿಯಮಿತವಾಗಿ ವೈದ್ಯರಿಂದ ಹಲ್ಲುಗಳನ್ನು ಶುಚಿಗೊಳಿಸುವುದರಿಂದ ಜಿಂಗೈವಿಟಿಸ್ ಬರದಂತೆ ತಡೆಯಬಹುದು.
ಯಾವುದೇ ರೂಪದಲ್ಲಿ ತಂಬಾಕು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ. ಅದರಿಂದ ಕ್ಯಾನ್ಸರ್ನಂತಹ ಕಾಯಿಲೆಗಳು ಉಂಟಾಗಬಹುದು. ತಂಬಾಕು, ವೈನ್, ಕಾಫಿ-ಟೀ ಸೇವನೆಯಿಂದ ಹಲ್ಲುಗಳ ಬಣ್ಣ ಬದಲಾಗುತ್ತದೆ. ಬ್ಲಿಚಿಂಗ್, ಟೂಥ್ ವೈಟನಿಂಗ್ನಂತಹ ಚಿಕಿತ್ಸೆ ಪಡೆಯುವುದರ ಮೂಲಕ ಆತ್ಮವಿಶ್ವಾಸವನ್ನು ಮತ್ತು ಸುಂದರವಾದ ಹಲ್ಲುಗಳನ್ನು ಪಡೆಯಬಹುದು.
ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ನಾವು ಸೇವಿಸುವ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ಸುಲಭವಾಗಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಿಹಿ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು, ಸಿಹಿತಿನಿಸುಗಳನ್ನು ಸೇವಿಸಿದ ನಂತರ ಬಾಯಿಯನ್ನು ಶುಚಿಗೊಳಿಸುವುದು ಆಮೂಲಕ ಮೂಲಕ ಹಲ್ಲು ಹುಳುಕಾಗುವುದನ್ನು ತಪ್ಪಿಸಬಹುದು.
ನಿದ್ರಾಹೀನತೆ, ಒತ್ತಡ, ರಾತ್ರಿವೇಳೆ ಹಲ್ಲುಗಳನ್ನು ಕಡಿಯುವುದು, ಯಾವುದೋ ಕಾರಣದಿಂದಾಗಿ ಹಲ್ಲುಗಳನ್ನು ಕಳೆದುಕೊಂಡಿರುವುದು ಅಥವಾ ತೆಗೆಸಿಕೊಂಡಿದ್ದರೂ ತಡ ಮಾಡದೆ ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ. ಅದನ್ನು ನಿರ್ಲಕ್ಷ್ಯ ಮಾಡಿ ಹಾಗೆ ಬಿಟ್ಟುಕೊಳ್ಳುವುದು ಒಳ್ಳೆಯದಲ್ಲ. ಅದನ್ನು ಸರಿಪಡಿಸಿಕೊಳ್ಳುವುದು ಒಳ್ಲೆಯದು. ಆ ಮೂಲಕ ಆರೋಗ್ಯದ ಸಂಕಲ್ಪವನ್ನು ಪೂರ್ಣಗೊಳಿಸಿ ಕೊಳ್ಳಬಹುದು. Wish you happy and healthy new year.
.