ಕೋಲಾರ ನಗರದ ಡಿಸಿಸಿ ಬ್ಯಾಂಕ್​ ಕಚೇರಿ ಎದುರು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. 
ನ್ಯೂಸ್

ಡಿಸಿಸಿ ಬ್ಯಾಂಕ್​ ಸಾಲ ನೀಡಲು ಮುಂದಾಗಲಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ಸಾಲಗಾರರಿಗೆ ಬ್ಯಾಂಕ್​ ಅಧಿಕಾರಿಗಳು ನೋಟಿಸ್​ ನೀಡಿ ಕಿರುಕುಳ ನೀಡುತ್ತಿರುವುದು ನಿಲ್ಲಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಡಿಸಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬ್ಯಾಂಕ್​ ಎದರು ಜಮಾಯಿಸಿದ ಸಂದ ಕಾರ್ಯಕರ್ತರು, ಮಹಿಳಾ ಸಂಗಳ ಸದಸ್ಯರು ನೋಟಿಸ್​, ಮಾಂಗಲ್ಯ ಸರಗಳನ್ನು ಪ್ರದರ್ಶಿಸಿ, ಬ್ಯಾಂಕ್​ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ನಿಲ್ಲಿಸಿರುವ ಸಾಲ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.

ಸಂದ ಮಹಿಳಾ ಟಕದ ಜಿಲ್ಲಾಧ್ಯೆ ಎ.ನಳಿನಿ ಗೌಡ ಮಾತನಾಡಿ, ಬ್ಯಾಂಕ್​ ಅಧಿಕಾರಿಗಳು ನೀಡಿರುವ ನೋಟಿಸ್​ ವಾಪಸ್​ ಪಡೆದು ಬಲವಂತದ ಸಾಲ ವಸೂಲಾತಿ ನಿಲ್ಲಿಸದೆ ಹೋದರೆ ಹಳ್ಳಿಗಳಲ್ಲಿ ಮಹಿಳೆಯರೇ ಅಧಿಕಾರಿಗಳನ್ನು ಕಂಬಗಳಿಗೆ ಕಟ್ಟಿ ಹಾಕುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ಬಡವರು ಮಹಿಳಾ ಸಂಗಳನ್ನು ಕಟ್ಟಿಕೊಂಡು ಬ್ಯಾಂಕಿನಿಂದ ಪಡೆದುಕೊಂಡಿದ್ದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿಕೊಂಡು ಬರುತ್ತಿದ್ದರು. ಆದರೆ ಆಡಳಿತ ಮಂಡಳಿ ಅಧಿಕಾರ ಮುಗಿದ ತಕ್ಷಣ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಬ್ಯಾಂಕ್​ ಪರಿಸ್ಥಿತಿ ಬದಲಾಗುತ್ತಿದೆ. ಸಾಲ ಮರುಪಾವತಿ ಮಾಡದೆ ಇರುವ ಬಡವರಿಗೆ ನೋಟಿಸ್​!, ರಾಜಕಾರಣಿಗಳಿಗೆ, ಬಲಾಢ್ಯರಿಗೆ ರಕ್ಷಣೆನಾ ಎಂದು ಪ್ರಶ್ನಿಸಿದರು.

ಈಗಾಗಲೇ ರಾಜ್ಯಾಂದ್ಯಂತ ಖಾಸಗಿ ಮೈಕ್ರೋ ಪೈನಾನ್ಸ್​ಗಳ ಹಾವಳಿ ಹೆಚ್ಚಾಗಿದ್ದು, ಸಾಲ ಪಡೆದುಕೊಂಡಿರುವ ಮಹಿಳೆಯರು ಮಾಂಗಲ್ಯ ಸರ, ಕಿಡ್ನಿಗಳನ್ನು ಮಾರಾಟ ಮಾಡಿ ಸಾಲ ತೀರಿಸುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆಲ್ಲ ಬ್ಯಾಂಕ್​ ಅಧಿಕಾರಿಗಳು ನೇರ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಮಹಿಳೆ ಶೈಲಜಾ ಮಾತನಾಡಿ, ಕೋಟಿ ಕೋಟಿ ಸಾಲ ಪಡೆದಿರುವ ಜನಪ್ರತಿನಿದಿಗಳಿಗೆ ನೋಟಿಸ್​ ನೀಡಲು ತಾಕತ್ತು ಇಲ್ಲದ ಅಧಿಕಾರಿಗಳೇ ಬಡವರು, ಕೂಲಿ ಮಾಡುವವರ ಮೇಲೆ ಪ್ರತಾಪ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬ್ಯಾಂಕಿನ ಎಜಿಎಂ ಕಲ್ಲಿಂ ವುಲ್ಲಾ, ಮೇಲಾಧಿಕಾರಿಗಳ ಆದೇಶದಂತೆ ರೈತರಿಗೆ ಮಹಿಳೆಯರಿಗೆ ನೋಟಿಸ್​ ನೀಡುತ್ತಿದ್ದೇವೆ. ಅದನ್ನು ಬಿಟ್ಟು ಯಾವುದೇ ಉದ್ದೇಶದಿಂದ ರೈತರಿಗೆ ತೊಂದರೆ ಕೊಡುತ್ತಿಲ್ಲ, ಬೇಡಿಕೆಗಳ ಮನವಿ ಗಮನಕ್ಕೆ ತಂದು ಈಗಾಗಲೇ ನೀಡಿರುವ ನೋಟಿಸ್​ಗಳನ್ನು ವಾಪಸ್​ ಪಡೆಯುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಂದ ಪದಾಧಿಕಾರಿಗಳಾದ ಕೆ.ನಾರಾಯಣಗೌಡ, ಮಂಜುನಾಥ್​, ಶಿವಾರೆಡ್ಡಿ, ತಿಮ್ಮಣ್ಣ, ಸುಪ್ರೀಂ ಚಲ, ಹೆಬ್ಬಣಿ ಆನಂದ್​ರೆಡ್ಡಿ, ಶ್ರೀನಿವಾಸ್​, ಆಂಜಿನಪ್ಪ, ಯಲ್ಲಪ್ಪ, ಹರೀಶ್​, ಅಪ್ಪೋಜಿರಾವ್​, ಲಕ್ಷ$್ಮಮ್ಮ, ರತ್ನಮ್ಮ, ಶಶಿಕಲಾ, ರಾಧ, ಸುಗುಣ, ಗೌರಮ್ಮ, ಮುನಿಯಮ್ಮ, ಚೌಡಮ್ಮ ಹಾಜರಿದ್ದರು.

* ಬ್ಯಾಂಕ್​ ಅಧಿಕಾರಿಗಳಿಗೆ ತರಾಟೆ

ರೈತ ಸಂದ ಕಾರ್ಯಕರ್ತರು ಡಿಸಿಸಿ ಬ್ಯಾಂಕ್​ ಎದುರು ಪ್ರತಿಭಟನೆ ನಡೆಸುತ್ತಿದ್ದ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕ ಕಲ್ಲಿಂವುಲ್ಲಾ, ಎಂಡಿ ಅವರ ಗಮನಕ್ಕೆ ತಂದರು. ಅವರು ದೂರವಾಣಿ ಕರೆ ಮಾಡಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಆದರು, ಪ್ರಯತ್ನ ವಿಲವಾಯಿತು. ನೋಟಿಸ್​ ಯಾಕೆ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಂಡಿ ಶೀಲಾ ಕಾನೂನು ಪ್ರಕಾರ ನೀಡಲಾಗಿದೆ, ಯಾರಿಗೂ ಕಿರುಕುಳ ನೀಡುವ ಉದ್ದೇಶ ಇಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಗರಂ ಆದ ಕಾರ್ಯಕರ್ತರು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು, ಪ್ರಮಾಣಿಕವಾಗಿ ಸಾಲ ಮರುಪಾವತಿ ಮಾಡಿರುವವರಿಗೆ ಮರು ಸಾಲ ಪಾವತಿ ಮಾಡಿ ಎಂದು ಪಟ್ಟು ಹಿಡಿದರು.