ಸಾಂಧರ್ಬಿಕ ಚಿತ್ರ 
ನ್ಯೂಸ್

ಹೊಲ್ಲಂಬಳ್ಳಿ ಸುತ್ತಮುತ್ತ ಚಿರತೆ ಸಂಚಾರ

ಕಿರುವಾರ ಎಸ್.ಸುದರ್ಶನ್

ಕೋಲಾರ: ತಾಲೂಕಿನ ಹೊಲ್ಲಂಬಳ್ಳಿ ಸುತ್ತಮುತ್ತ ಕಳೆದ ಮೂರ್ನಾಲ್ಕು ದಿನಗಳಿಂದ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮದ ಯುವಕರು ಊರಾಚೆ ಕುರಿ ಮೇಯಿಸುತ್ತಿದ್ದಾಗ ಚಿರತೆ ದಾಳಿ ಮಾಡಿದ್ದು, ಕುರಿಯನ್ನು ಕೊಂದುಹಾಕಿದೆ. ಪಶುವೈದ್ಯರು ಗ್ರಾಮಕ್ಕೆ ಭೇಟಿ ನೀಡಿ ಕುರಿ ಶವ ಪರೀೆ ಮಾಡಿ, ಚಿರತೆ ದಾಳಿಯಿಂದಲೇ ಕುರಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಇನ್ನು ಚಿರತೆ ಸಂಚಾರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.