ನ್ಯೂಸ್

ಮಂಗನನ್ನು ಬೇಟೆಯಾಡಲು ಟ್ರಾನ್ಸ್ ಫಾರ್ಮರ್ ಹತ್ತಿದ ಚಿರತೆ ವಿದ್ಯುತ್ ಸ್ಪರ್ಶಿಸಿ ಸಾವು

ಮಹರಾಷ್ಟ್ರ: ಮಂಗನನ್ನು ಬೇಟೆಯಾಡಲು ವಿದ್ಯುತ್ ಟ್ರಾನ್ಸ್ ಫಾರ್ಮರ್ ಮೇಲೆ ಹತ್ತಿದ ಚಿರತೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ  ಈ ಘಟನೆ ನಡೆದಿದೆ. 

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಮಂಗವನ್ನು ಬೇಟೆಯಾಡಲು ಚಿರತೆಯೊಂದು ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದೆ. ಒಂದು ಕೋತಿ ಮತ್ತು ಎರಡು ಚಿರತೆಗಳು ಸಾವನ್ನಪ್ಪಿವೆ. ಚಂದ್ರಾಪುರ ಸಮೀಪದ ಸಿಂದೇವಾಹಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಂಗ ಕುಳಿತಿರುವುದನ್ನು ಕಂಡ ಚಿರತೆ ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದೆ ಎನ್ನಲಾಗಿದೆ.

ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ತಂಡಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸ್ಪರ್ಶದಿಂದ ಪ್ರಾಣಿಗಳು ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ.  ಸಾವನ್ನಪ್ಪಿರುವ ಪ್ರಾಣಿಗಳನ್ನು ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್‌ನಿಂದ ಕೆಳಗಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ: ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲುಗೇಟ್‌ ಸುತ್ತ ಮುತ್ತ ಚಿರತೆ ಓಡಾಡುತ್ತಿತ್ತು. ಇಲ್ಲಿನ ಪ್ರತಿಷ್ಠಿತ cadenza ಅಪಾರ್ಟ್ ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯುವಾಗ ಸಿಬ್ಬಂದಿ ಗುಂಡೇಟಿಗೆ ಚಿರತೆ ಮೃತಪಟ್ಟಿತ್ತು. ಆದರೆ ಇತ್ತ ಬೆಂಗಳೂರು ನಗರ ನಿವಾಸಿಗಳಿಗೆ ಮತ್ತೆ ಚಿರತೆ ಆತಂಕ ಶುರುವಾಗಿದೆ. ನೈಸ್ ರಸ್ತೆ ಸಮೀಪದ ಚಿಕ್ಕತೋಗೂರು ಬಳಿ ನಿನ್ನೆ (ನ.04) ರ ಸಂಜೆ 7.40ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದೆ. ಶನಿವಾರ ಸಂಜೆ ಚಿರತೆ ಮನೆ ಕಂಪೌಂಡ್​​ ಒಳಗೆ ನುಗ್ಗಿದ್ದು, ಬಾಗಿಲು ಬಳಿ ಬಂದ ಚಿರತೆ ಕಂಡು ಬಾಲಕ ಕಿರುಚಾಡಿದ್ದಾನೆ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ. ಕೆ.ಆರ್.ಪುರಂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.