ಬೆಂಗಳೂರು : ಸಮಾಜದಲ್ಲಿ ನಡೆಯುತ್ತಿರುವ ಲಂಚ ಕೊರತನ ಮತ್ತು ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆಯಲ್ಲಿ ಕಾನೂನಿನ ಅರಿವು ಬೇಕು ಹಾಗೂ ಯುವಕರು ಈ ಭ್ರಷ್ಟ ವ್ಯವಸ್ಥೆ ವಿರುದ್ದು ಪ್ರಶ್ನೆ ಮಾಡುವ ಅರಿವನ್ನು ಯುವಕರು ಬೆಳೆಸಿಕೊಳ್ಳ ಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ತಿಳಿಸಿದ್ದಾರೆ.
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ದಿನಾಚರಣೆ ಹಾಗೂ ಸಂಘಟನೆಯ 5ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಹಿಸಿ ಮಾತನಾಡಿದರು.
ರಾಜಕಾರಣಿ ಮಕ್ಕಳು ರಾಜಕಾರಣಿಗಳು ಆಗುವುದು ನಿಲ್ಲಬೇಕು. ಸಮಾಜದ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳು ಮಾತ್ರ ರಾಜಕಾರಣದಲ್ಲಿ ಉಳಿಯಬೇಕು. ಶಿಕ್ಷಣದ ತೆಗೆ ಉತ್ತಮ ಸಮಾಜ ಕಟ್ಟುವಲ್ಲಿ ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಬೆಟ್ಟಲ್ಲಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಮಾಜದಲ್ಲಿನ ಭ್ರಷ್ಟಚಾರ ತಡೆಗಟ್ಟಲು ಗ್ರಾಮ ಪಂಚಾಯತಿ ಮಟ್ಟದಿಂದ ಪ್ರಾರಂಭ ಮಾಡಿ ವಿಧಾನ ಸೌಧದವರೆಗೆ ಭ್ರಷ್ಟ ಚಾರ ನಿರ್ಮೂಲನೆ ಅಭಿಯಾನ ಶುರು ಆಗಬೇಕು. ಮಾಹಿತಿ ಹಕ್ಕು ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೋರಾಟ ಮಾಡುವುದರ ಮುಖಾಂತರ ಭ್ರಷ್ಟಚಾರದ ವಿರುದ್ಧ ಧ್ವನಿ ಆಗಬೇಕು ಎಂದು ಕರೆ ಕೊಟ್ಟರು.
ಇದೇ ವೇಳೆ ಮಾಹಿತಿ ಹಕ್ಕು ಆಯೋಗದ ವತಿಯಿಂದ ಸರ್ಕಾರದ ಖಜಾನೆಗೆ ಅಧಿಕಾರಿಗಳಿಂದ ದಂಡ ತುಂಬಿಸಿದ ಸಾಮಾಜಿಕ ಕಾರ್ಯಕರ್ತರಿಗೆ ’ವಿಚಾರಕ್ರಾಂತಿ ರತ್ನ ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾಹಿತಿ ಹಕ್ಕು ಅಧ್ಯಾಯನ ಕೇಂದ್ರದ ವೀರೇಶ್ ಬೆಳ್ಳೂರ್, ಸಂಸ್ಥಾಪಕ ಹೆಚ್. ಜಿ ರಮೇಶ್ ಕುಣಿಗಲ್, ರಾಜ್ಯಾಧ್ಯಕ್ಷ ಚೆನ್ನಯ್ಯ ಎಂ ವಸ್ತ್ರದ್, ಸಂಘಟನೆಯ ಓಂಕಾರಪ್ಪ, ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಉಪಸ್ಥಿತರಿದ್ದರು.