National Sandalwood Conference 
ನ್ಯೂಸ್

ಬೆಳೆಗಾರರ ರಕ್ಷಣೆಗೆ ಕಾನೂನು ತಿದ್ದುಪಡಿ, ಶ್ರೀಗಂಧ ಮಂಡಳಿ ಸ್ಥಾಪನೆ: ಸಚಿವ ರಾಮಲಿಂಗಾರೆಡ್ಡಿ ಭರವಸೆ - Sandalwood Board

ಶ್ರೀಗಂಧ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಜ್ಯ ಅರಣ್ಯ ಇಲಾಖೆ ಕಾನೂನುಗಳ ಪರಿಷ್ಕರಣೆ, ಭಾರತೀಯ ಅರಣ್ಯ ಕಾಯ್ದೆ-27ಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಶ್ರೀಗಂಧದ ಮಾರಾಟ ಮತ್ತು ಸಾಗಾಣಿಕೆಗೆ ಇರುವ ತೊಡಕು ನಿವಾರಿಸುವ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರ ಹೇಳಿದರು.

ಬೆಂಗಳೂರು: (Sandalwood Board) ರಾಜ್ಯದಲ್ಲಿ ಶ್ರೀಗಂಧ ಬೆಳೆಗಾರರ ಹಿತರಕ್ಷಣೆಗಾಗಿ ಕಾನೂನು ತಿದ್ದುಪಡಿ ಮತ್ತು ಮಂಡಳಿ ರಚನೆ ಸೇರಿ ಹಲವು ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ಕೊಟ್ಟಿದ್ದಾರೆ.

ಎಸ್.ಎಂ.ಕೃಷ್ಣ ಸ್ಮರಣಾರ್ಥ ಅಂಗವಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಅಖಿಲ ಭಾರತ ಶ್ರೀಗಂಧ ಬೆಳೆಗಾರರು, ಸಂಸ್ಕರಣೆದಾರರು ಮತ್ತು ಮಾರುಕಟ್ಟೆದಾರರ ಒಕ್ಕೂಟ ಸಹಯೋಗದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳಗಾರರ ಸಂಘ, ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಶ್ರೀಗಂಧ ಸಮಾವೇಶ’ದಲ್ಲಿ ಸಂಘದ ಬೇಡಿಕೆಗಳಿಗೆ ಸ್ಪಂದಿಸಿ ಸಚಿವರು ಮಾತನಾಡಿದರು.

ಶ್ರೀಗಂಧ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಜ್ಯ ಅರಣ್ಯ ಇಲಾಖೆ ಕಾನೂನುಗಳ ಪರಿಷ್ಕರಣೆ, ಭಾರತೀಯ ಅರಣ್ಯ ಕಾಯ್ದೆ-27ಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಶ್ರೀಗಂಧದ ಮಾರಾಟ ಮತ್ತು ಸಾಗಾಣಿಕೆಗೆ ಇರುವ ತೊಡಕು ನಿವಾರಿಸುವ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರ ಹೇಳಿದರು.

ಸಿರಿಗೆರೆಯ ತರಳಬಾಳು ಬೃಹನ್ಮಠ ಪೀಠಾಧ್ಯಕ್ಷ ಶ್ರೀ ಶಿವಮೂರ್ತಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಸಂಸದ ಯದುವೀರ್ ಒಡೆಯರ್ ಸೇರಿ ಮತ್ತಿತರರಿದ್ದರು.

ಕೃಷಿ ಉತ್ಪನ್ನವಾಗಿ ಶ್ರೀಗಂಧ ಪರಿಗಣನೆಗೆ ಕ್ರಮ:

ಕೇಂದ್ರ ಸರ್ಕಾರದ ಶ್ರೀಗಂಧ ಅಭಿವೃದ್ಧಿ ಸಮಿತಿಯ ಶಿಫಾರಸಿನಂತೆ ಶ್ರೀಗಂಧವನ್ನು ಕೃಷಿ ಉತ್ಪನ್ನವಾಗಿ ಪರಿಗಣಿಸಲಾಗುವುದು. ರೈತರ ಜಮೀನಿನಲ್ಲಿ ಬೆಳೆಯುವ ಇತರ ಬೆಳೆಗಳಂತೆ ಶ್ರೀಗಂಧವನ್ನು ತೋಟಗಾರಿಕೆ ಬೆಳೆಯೆಂದು ಗುರುತಿಸಿ, ತೋಟಗಾರಿಕೆ ಇಲಾಖೆಗೆ ವರ್ಗಾಯಿಸಿ ಏಕಗವಾಕ್ಷಿ ವ್ಯವಸ್ಥೆಯಡಿ ಪ್ರೋತ್ಸಾಹ ನೀಡಲಾಗುವುದು. ರಾಷ್ಟ್ರಮಟ್ಟದಲ್ಲಿ ‘ಸ್ಯಾಂಡಲ್‌ವುಡ್ ಬೋರ್ಡ್ ಆ್ ಇಂಡಿಯಾ’ ಸ್ಥಾಪಿಸಲು ಶಿಫಾರಸು ಮಾಡಲಾಗುವುದು. ರಾಜ್ಯದಲ್ಲಿ ಶ್ರೀಗಂಧಕ್ಕೆ ಸಂಬಂಧಿಸಿದ ಮಂಡಳಿ ರಚಿಸುವ ವಿಷಯವನ್ನು ಕ್ಯಾಬಿನೆಟ್ ಮುಂದೆ ಮಂಡಿಸಲಾಗುವುದು. ಶ್ರೀಗಂಧ ಬೆಳೆಗಾರರಿಗೆ ಬ್ಯಾಂಕ್ ಸಾಲ, ವಿಮಾ ಸೌಲಭ್ಯ, ತರಬೇತಿ, ಪ್ರಾಕೃತಿಕ ವಿಕೋಪದ ಸಮಸ್ಯೆಗಳಿಗೆ ಸ್ಪಂದಿಸುವುದು, ಮಾರುಕಟ್ಟೆ ಬೆಲೆ ನಿಗದಿಪಡಿಸುವ ಪೂರಕ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರ ರಾಮಲಿಂಗಾರೆಡ್ಡಿ ಹೇಳಿದರು.

ಭೂಸ್ವಾಧೀನ ಪ್ರಕರಣಗಳಲ್ಲಿ ರೈತರ ಜಮೀನಿನಲ್ಲಿರುವ ಶ್ರೀಗಂಧ ಮರಗಳಿಗೆ ಮೌಲ್ಯಮಾಪನ ನಿಗದಿಪಡಿಸುವುದು. ತೆಂಗು, ಅಡಿಕೆ, ಮಾವು ಸೇರಿದಂತೆ ಇತರ ಮರಗಳಂತೆ ಶ್ರೀಗಂಧಕ್ಕೂ ದರ ನಿಗದಿ ಮಾಡಲಾಗುವುದು.ಮರಗಳಿಗೆ ಜಿಯೋ ಟ್ಯಾಪಿಂಗ್ ಅಳವಡಿಸಲಾಗುವುದು. ರಾಜ್ಯದ ಬೆಳೆಗಾರರು, ಬೆಳೆಯುವ ಪ್ರದೇಶ ಮತ್ತು ಜಮೀನಿನ ಮಾಲೀಕರ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು.ಶ್ರೀಗಂಧ ಕಳ್ಳತನ ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಜಂಟಿ ಸಭೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದು.

ರಾಮಲಿಂಗಾರೆಡ್ಡಿ, ಅರಣ್ಯ ಸಚಿವ.

ಮಾಜಿ ಸಿಎಂ ದಿ.ಎಸ್.ಎಂ.ಕೃಷ್ಣ ಅವರು, ಮೊದಲ ಬಾರಿಗೆ ರೈತರಿಗೆ ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆಯಲು ಅವಕಾಶ ಮಾಡಿಕೊಟ್ಟರು. ಅನೇಕ ರೈತರು ಶ್ರೀಗಂಧ ಬೆಳೆಯುವ ಮೂಲಕ ಕೋಟ್ಯಾಧೀಶರಾಗಲು ಕನಸು ಕಾಣುತ್ತಿದ್ದಾರೆ. ಶ್ರೀಗಂಧ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ರೈತರೇ ಉದ್ಯಮಿಯಾಗಲಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ರಾಜ್ಯದ ಆರ್ಥಿಕತೆಗೆ ಸಹಾಯವಾಗಲಿದೆ. ಸಮಾವೇಶದಲ್ಲಿ ಕೆಲವೊಂದು ತೆಗೆದುಕೊಂಡಿರುವ ನಿರ್ಣಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು.

ಕೆ.ಅಮರ್‌ನಾರಾಯಣ್, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳಗಾರರ ಸಂಘದ ಅಧ್ಯಕ್ಷ