ಶಿವಮೊಗ್ಗ ಎಟಿಎನ್‌ಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಪದವಿ ಪ್ರಮಾಣ ಪತ್ರ ನೀಡಿ ವಿದ್ಯಾರ್ಥಿನಿಯೊಬ್ಬರನ್ನು ಗೌರವಿಸಿದರು. ಮಮತಾ, ಸುರೇಶ್, ಅಶ್ವತ್ಥನಾರಾಯಣ, ಮಂಜುನಾಥ, ನಾಗರಾಕ್, ಜಗದೀಶ್, ಖಾಜೀಂ ಷರ್ೀ ಇತರರಿದ್ದರು.  
ನ್ಯೂಸ್

ಮೊಬೈಲ್ ಬಿಟ್ಟು ಸಂಬಂಧಗಳಿಗೆ ಒತ್ತು ನೀಡಿ: ಅರುಣ್

ಶಿವಮೊಗ್ಗ: ಮೊಬೈಲ್ ಗೀಳಿಗೆ ಸಿಲುಕಿರುವ ಆಧುನಿಕ ಯುವ ಸಮೂಹ ಭಾವನಾತ್ಮಕ ಸಂಬಂಧದಿಂದ ಕಣ್ಮರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಬೇಸರ ವ್ಯಕ್ತಪಡಿಸಿದರು.

ಸೋಮವಾರ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ಅಧ್ಯಯನ, ಕೌಶಲ ಹೆಚ್ಚಿಸಿಕೊಳ್ಳುವ ಜತೆಗೆ ವಿದ್ಯಾರ್ಥಿಗಳು ಭಾವನಾತ್ಮಕ ಸಂಬಂಧಗಳಿಗೂ ಒತ್ತು ನೀಡಬೇಕೆಂದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿದೆ. ಬದಲಾವಣೆಗಳ ಅವಶ್ಯಕತೆಗೆ ತಕ್ಕಂತೆ ಅಧ್ಯಯನ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎನ್‌ಇಪಿ ಸರಿಯಿಲ್ಲ ಎಂದು ಪ್ರತಿಪಾದಿಸುವವರು ಮೊದಲು ಎನ್‌ಇಪಿಯಲ್ಲಿ ಒದಗಿಸಿರುವ ಸಕಾರಾತ್ಮಕ ಅಂಶಗಳನ್ನು ತಿಳಿಯಬೇಕು ಎಂದರು.
ಎನ್‌ಇಎಸ್ ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಸಮಾಜ ನಮಗೆ ಬಹಳಷ್ಟು ನೀಡಿದ್ದು, ಸಮಾಜಕ್ಕೆ ನಾವೂ ಉತ್ತಮ ಕೊಡುಗೆ ನೀಡಬೇಕಿದೆ. ಸಮಾಜಕ್ಕೆ ಅನೇಕ ದೊಡ್ಡ ಸಾಧಕರನ್ನು, ಉತ್ತಮ ಪ್ರಜೆಗಳನ್ನು ನೀಡಿದ ಖ್ಯಾತಿ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನದ್ದಾಗಿದೆ ಎಂದರು.
ಪ್ರಾಚಾರ್ಯೆ ಪ್ರೊ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಎಚ್.ಎಂ.ಸುರೇಶ್, ಪ್ರಮುಖರಾದ ಖಾಜೀಂ ಷರೀಫ್, ಜಗದೀಶ್, ನಾಗರಾಜ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು. ಬಿಕಾಂ ಮತ್ತು ಬಿಬಿಎ ವಿಭಾಗಗಳ ಸುಮಾರು 400 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು.