ದೈನಂದಿನ ಬಳಕೆಯ ವಾಕ್ಯಗಳು
ಬಹುಶಃ ಅವರು ಇದಕ್ಕೆ ಒಪ್ಪಿಗೆ ಸೂಚಿಸಬೇಕಾದರೆ ಅವರಿಗೆ ಸ್ವಲ್ಪ ಬೆಣ್ಣೆ ಹಚ್ಚಬೇಕಾದೀತು.
I think I’ll have to butter them up before they agree to this.
ಸಂಸ್ಥೆಯಲ್ಲಿನ ರಕ್ಷಣಾ ವ್ಯವಸ್ಥೆಯ ಬಗ್ಗೆ ಆಕೆ ತುಟಿಪಿಟಿಕ್ ಎನ್ನಲೂ ತಯಾರಿರಲಿಲ್ಲ (ರಹಸ್ಯವಾಗಿಟ್ಟಿದ್ದಳು)
She was very cagey about the security system in the company.
ಪ್ರಬಂಧಕರು ಗುಮಾಸ್ತನನ್ನು ತಮ್ಮ ಕೋಣೆಗೆ ಕರೆಸಿಕೊಂಡು ನಮ್ಮ ದಸ್ತಾವೇಜನ್ನು ಏಕೆ ಕಳುಹಿಸಿಲ್ಲವೆಂದು ಕೇಳಿದರು.
The manager called the clerk over to his cabin and asked why our file was not moved.
ಯಾರಾದರೂ ವಿದ್ಯಾರ್ಥಿ ಗೈರುಹಾಜರಿದ್ದಾರೋ ಎಂದು ಪರೀಕ್ಷಿಸಲು ಶಿಕ್ಷಕ ಎಲ್ಲರ ಹೆಸರು ಕರೆದರು.
The teacher called the roll to see if any students were absent.
ದಯವಿಟ್ಟು ನಿಮ್ಮ ನಾಯಿಯನ್ನು ಹಿಂದೆ ಕರೆದುಕೊಳ್ಳಿ, ನನಗೆ ನಾಯಿ ಎಂದರೆ ಭಯ!
Please call your dog off. I’m very scared of dogs.
ನನ್ನ ಮಗಳಿಗೆ ಕ್ಯಾಮರಾ ಎಂದರಾಗದು. ಆಕೆ ತನ್ನ ಭಾವಚಿತ್ರ ತೆಗೆಸಿಕೊಳ್ಳಲು ಇಷ್ಟಪಡುವುದಿಲ್ಲ.
My daughter is camera-shy. She dislikes having her photo taken.
ಜಾಕಿಗಳು ಕುದುರೆಗಳನ್ನು ಮೈದಾನದ ಸುತ್ತಲೂ ಹತೋಟಿಯಲ್ಲಿಡಲಾಗುವಷ್ಟು ವೇಗದಲ್ಲಿ ಓಡಿಸಿ ತರಬೇತಿ ನೀಡುತ್ತಾರೆ.
Jackies train the horses by cantering round the field several times.