ನ್ಯೂಸ್

ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ; ದೈನಂದಿನ ಬಳಕೆಯ ವಾಕ್ಯಗಳು

lakshmihegde

ತೆಂಗಿನಕಾಯಿಗಳು, ಹಣ್ಣುಗಳು ಹಾಗೂ ಪೂಜಾ ಸಾಮಗ್ರಿಗಳು ಕೋಣೆಯಲ್ಲಿ ಎಲ್ಲೆಡೆ ಬಿದ್ದುಕೊಂಡಿದ್ದವು.

Coconuts, fruits and things required  for pooja were bestrewn in the room.

ದಯವಿಟ್ಟು ಮುಂದಿನ ರವಿವಾರ ನೀವು ನನ್ನ ಮಗಳ ನಿಶ್ಚಿತಾರ್ಥಕ್ಕೆ ಬಂದು ಅವಳನ್ನು ಆಶೀರ್ವದಿಸಬೇಕು.

Please come to the betrothal of my daughter next Sunday and bless her.

ನಿಶ್ಚಿತಾರ್ಥದ ನಂತರ ನಿಮ್ಮ ಭಾವೀ ಪತಿ / ಪತ್ನಿಗೆ ಕರೆ ಮಾಡಿದ್ದೀರಾ?

Have you called your betrothed  after the engagement / betrothal?

ಕೇಂಬ್ರಿಜ್ ಅಡ್ವಾನ್ಸ್​ಡ್ ಲರ್ನರ್ಸ್ ಡಿಕ್ಷ್​ನರಿ ಅಭ್ಯಸಿಸಿ ನೀನು ನಿನ್ನ ಇಂಗ್ಲಿಷ್ ಉತ್ತಮಪಡಿಸಿಕೊಳ್ಳಬಹುದು.

You can better your English by studying Cambridge Advanced Learners Dictionary.

ನನಗೊಂದು ಲಾಟರಿ ಹೊಡೆದಿದ್ದಲ್ಲಿ ನಾನು ಶ್ರೀಮಂತನಾಗಿರುತ್ತಿದ್ದೆ.

I would be better off if I had won a lottery.

ಆಚಾರಿ ಟೀಪಾಯಿಯ ಅಂಚುಗಳು ಇಳಿಜಾರಾಗಿರುವಂತೆ ಮಾಡಿದ.

The carpenter bevelled the edges of the teapoy.

ಕಾರ್ ಚಲಾಯಿಸುತ್ತಿರುವಾಗ ಎಲ್ಲಾದರೂ ನಿದ್ರೆ ಗಿದ್ರೆ ಮಾಡೀಯೇ! / ನಿದ್ರೆ ಬಂದೀತು ಎಚ್ಚರ!

Beware of sleeping while driving the car!

ನಾನು ಅವಳನ್ನು ನೋಡಲು ಇಚ್ಛಿಸುವುದಿಲ್ಲ ಏಕೆಂದರೆ ಪುನಃ ಅವಳ ಸೌಂದರ್ಯದಿಂದ ಹುಚ್ಚಾಗುವುದು ನನಗಿಷ್ಟವಿಲ್ಲ.

I don’t want to see her as I don’t want to be bewitched by her beauty once again!