ನ್ಯೂಸ್

ಪೊಲೀಸರ ವಿರುದ್ಧ ವಕೀಲರ ಪ್ರತಿಭಟನೆ

ರಾಣೆಬೆನ್ನೂರ: ಇಲ್ಲಿಯ ವಕೀಲರ ಸಂದ ಹಿರಿಯ ಸದಸ್ಯರ ವಿರುದ್ಧ ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಎ್​ಐಆರ್​ಅನ್ನು ದಾಖಲಿಸಿರುವುದನ್ನು ಖಂಡಿಸಿ ಇಲ್ಲಿಯ ವಕೀಲರ ಸಂದ ವತಿಯಿಂದ ನಗರದ ಬಸ್​ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.

ಶಹರ ಠಾಣೆ ಪೊಲೀಸರು ಹಿರಿಯ ವಕೀಲರಾದ ಪಿ.ಆರ್​. ಕುಪ್ಪೇಲೂರ ಹಾಗೂ ಕುಮಾರ ಎಂಬುವರ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿ ಯಾವುದೆ ತನಿಖೆ ಮಾಡದೆ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ. ಕೂಡಲೇ ಪೊಲೀಸರು ವಕೀಲರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಬಂದ ಗ್ರೇಡ್​&2 ತಹಸೀಲ್ದಾರ್​ ಅರುಣ ಕಾರಗಿ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಹೊನ್ನಪ್ಪ ತಿಮ್ಮೇನಹಳ್ಳಿ, ಸುರೇಶ ದ್ಯಾವಕ್ಕಳವರ, ಎಂ.ಎಸ್​. ಭಿಾವತಿರ್ಮಠ, ಡಿ.ಎಲ್​. ಬುಡಪ್ಪಳವರ, ಪಿ.ಪಿ. ಪಾರ್ವತೇರ, ರಾವೇಂದ್ರ ಗಡ್ಡದ ಮತ್ತಿತರರು ಪಾಲ್ಗೊಂಡಿದ್ದರು.