ನ್ಯೂಸ್

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸುವಂತೆ Lawrence Bishnoiಗೆ ಆಫರ್; ಯಾವ ಪಾರ್ಟಿ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿರನ್ನು (Baba Siddique) ಹತ್ಯೆ ಮಾಡಿಸುವ ಮೂಲಕ ವಿಶ್ವದಾದ್ಯಮತ ವ್ಯಾಪಕ ಸದ್ದು ಮಾಡಿರುವ ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ದಿನ ಕಳೆದಂತೆ ತನ್ನ ಪಾಪುಪ್ಯಾರಿಟಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಇದೀಗ ಈತನಿಗೆ ಮಹರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Assembly Election) ಸ್ಫರ್ಧಿಸುವಂತೆ ಆಫರ್​ ನೀಡಲಾಗಿದೆ.

288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ (Maharashtra Assembly Election) ನವೆಂಬರ್​ 20ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದ್ದು, ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇದೆಲ್ಲದರ ನಡುವೆ ಲಾರೆನ್ಸ್​ ಬಿಷ್ಣೋಯ್​ಗೆ (Lawrence Bishnoi) ಟಿಕೆಟ್ ಆಫರ್​ ನೀಡಲಾಗಿದ್ದು, ಈ ವಿಚಾರ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಸದ್ಯ ಗುಜರಾತ್​ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿರುವ (Sabarmati Central Jail) ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ಜೈಲಿನಲ್ಲಿದ್ದುಕೊಂಡೆ ಎಲ್ಲವನ್ನು ಆಪರೇಟ್​ ಮಾಡುತ್ತಿದ್ದು, ಈತನಿಗೆ ಉತ್ತರ ಭಾರತೀಯ ವಿಕಾಸ ಸೇನಾ (UBVS) ಹೆಸರಿನ ರಾಜಕೀಯ ಪಕ್ಷವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸ್ಫರ್ಧಿಸುವಂತೆ ಆಫರ್​ ನೀಡಿದ್ದು, ಈ ಬಗ್ಗೆ ಲಾರೆನ್ಸ್​ಗೆ ಪತ್ರದ ಮೂಲಕ ಮನವಿ ಮಾಡಿದೆ. 

ಅಕ್ಟೋಬರ್​ 18ರಂದು ಬರೆದಿರುವ ಪತ್ರದಲ್ಲಿ ಲಾರೆನ್ಸ್​ ಬಿಷ್ಣೋಯ್​ನನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ಗೆ (Bhagat Singh) ಹೋಲಿಕೆ ಮಾಡಲಾಗಿದ್ದು, ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Assembly Election) ಸ್ಫರ್ಧಿಸುವಂತೆ ಮನವಿ ಮಾಡಲಾಗಿದೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್​ ಆಗಿದೆ.

ಸಲ್ಮಾನ ಖಾನ್​ (Salman Khan) ಹಾಗೂ ದಾವೂದ್​ ಇಬ್ರಾಹಿಂ (Dawood Ibrahim) ಜೊತೆ ನಂಟು ಹೊಂದಿದ್ದಕ್ಕೆ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ಕಿರನ್ನು (Baba Siddique) ಅಕ್ಟೋಬರ್​ 12ರಂದು ಅವರ ಮನೆಯ ಮುಂಭಾಗವೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹತ್ಯೆಯ ಹೊಣೆಯನ್ನು ಕುಖ್ಯಾತ ಲಾರೆನ್ಸ್​ ಬಿಷ್ಣೋಯ್​ ಹೊತ್ತುಕೊಂಡಿದ್ದರು. ಇದಾದ ಬಳಿಕ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತಾಗಿ ಪ್ರಶ್ನೆಗಳು ಉದ್ಭವಿಸಿದ್ದವು.