ಧಾರವಾಡ: ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ ೧೧ ಅಭ್ಯರ್ಥಿಗಳಿಂದ ೧೨ ನಾಮಪತ್ರಗಳು ಸಲ್ಲಿಕೆ ಆಗಿವೆ. ಪಕ್ಷೇತರ ಅಭ್ಯರ್ಥಿಯಾಗಿ ರಿಯಾಜ್ ಶೇಖ್, ಪ್ರವೀಣಕುಮಾರ ಮಾದರ, ಪ್ರವೀಣ ಹತ್ತೆನವರ, ರಾಹುಲ ಗಾಂಽ ಎನ್., ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹ್ಮದ್ ಇಸ್ಮಾಯಿಲ್ ಮುಕ್ತಿ, ರೈತ ಭಾರತ ಪಾರ್ಟಿಯಿಂದ ಹೇಮರಾಜ ಬಡ್ನಿ, ಇಂಡಿಯನ್ ಲೇಬರ್ (ಅಂಬೇಡ್ಕರ್, ಪುಲೆ) ಪಕ್ಷದಿಂದ ವೆಂಕಟೇಶಪ್ರಸಾದ ಎಚ್., ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ, ಸಮ್ಯಕ ಪಾರ್ಟಿಯಿಂದ ವೆಂಕಟೇಶ ಆಚಾರ್ಯ ಮಣ್ಣೂರ, ಟಿಪ್ಪು ಸುಲ್ತಾನ ಪಾರ್ಟಿಯಿಂದ ಶೌಕತ್‌ಅಲಿ ಬಂಕಾಪುರ ಮತ್ತು ವೀಣಾ ಜನಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ೧ ಹಾಗೂ ಪಕ್ಷೇತರರಾಗಿ ೧ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಽ ದಿವ್ಯ ಪ್ರಭು ತಿಳಿಸಿದ್ದಾರೆ.