ನ್ಯೂಸ್

ಲ್ಯಾಪ್‌ಟಾಪ್ ಕಳ್ಳರ ಸೆರೆ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಕೆಲಸ ಮಾಡುವ ಕಂಪನಿಯಲ್ಲಿ ಲ್ಯಾಪ್‌ಟಾಪ್ ಕಳವು ಮಾಡಿದ್ದ ಆರು ಆರೋಪಿಗಳನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನಕಪುರ ರಸ್ತೆಯ ರಘುವನಹಳ್ಳಿ ನಿವಾಸಿಗಳಾದ ಭರತ್, ವಿಶ್ವನಾಥ, ಯುವರಾಜ್, ಮುತ್ತು ಸೆಲ್ವಂ, ಸಂದೀಪ್ ಮತ್ತು ನಾಗೇಂದ್ರಪ್ರಸಾದ್ ಬಂಧಿತರು. 2.40 ಲಕ್ಷ ರೂ. ಮೌಲ್ಯದ ಐದು ಲ್ಯಾಪ್‌ಟಾಪ್‌ಗಳು, ಎರಡು ಲ್ಯಾಪ್‌ಟಾಪ್ ಬ್ಯಾಗ್, ಚಾರ್ಜರ್, ಕಂಪನಿಯ ಕೆಲವು ಜೆರಾಕ್ಸೃ್ ದಾಖಲಾತಿ, ಫೆಡರಲ್ ಬ್ಯಾಂಕ್‌ನ ಖಾಲಿ ಚೆಕ್‌ಗಳು, ಡಿವಿಆರ್ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಜೆ.ಪಿ. ನಗರ 3ನೇ ಹಂತದ ಬಿಜಿನೆಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕಚೇರಿಯ ಹಿಂಬಾಗಿಲ ಚಿಲಕ ಮುರಿದು ಕಳವು ಮಾಡಿದ್ದರು.

ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ವೇತನ ವಿಚಾರಕ್ಕೆ ಕಂಪನಿ ಮಾಲೀಕರ ಜತೆಗೆ ಮನಸ್ತಾಪ ಮಾಡಿಕೊಂಡಿದ್ದರು. ವಾರದ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ ಭರತ್, ಇತರರ ಜತೆ ಸೇರಿ ಕೃತ್ಯ ಎಸಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.