ನ್ಯೂಸ್

ಭಾಷೆಗಾಗಿ ಹತ್ತು ಪ್ರಯೋಗಾಲಯ; ವಿದ್ಯಾರ್ಥಿಗಳ ಸಂವಹನ ಕೌಶಲ ವೃದ್ಧಿಗೆ ಉಪಾಯ

Bellari - Heera Nayak

ಲಖನೌ: ಜಗತ್ತಿನಲ್ಲಿ ನಾನಾ ಥರದ ಪ್ರಯೋಗಾಲಯಗಳಿವೆ. ಅವುಗಳ ನಡುವೆ ಈಗ ಹೊಸದೊಂದು ಪ್ರಯೋಗಾಲಯ ಸುದ್ದಿಯಲ್ಲಿದೆ. ಅಷ್ಟಕ್ಕೂ ಈ ಪ್ರಯೋಗಾಲಯ ನಿರ್ಮಾಣ ಆಗಲಿರುವುದು ಭಾಷೆಗಾಗಿ.

ವಿದ್ಯಾರ್ಥಿಗಳಲ್ಲಿನ ಸಂವಹನಾ ಕೌಶಲ ಅಭಿವೃದ್ಧಿ ಪಡಿಸಲು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಭವಿಷ್ಯಕ್ಕೆ ಭಾಷಾ ಸಮಸ್ಯೆ ಅಡ್ಡಿ ಆಗದಂತೆ ನೋಡಿಕೊಳ್ಳಲು ಸರ್ಕಾರ ಭಾಷೆಗೆಂದೇ ಪ್ರಯೋಗಾಲಯಗಳನ್ನು ತೆರೆಯಲು ಮುಂದಾಗಿದೆ.

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಭಾಷೆಗಾಗಿ ಹತ್ತು ಪ್ರಯೋಗಾಲಯಗಳನ್ನು ಆರಂಭಿಸಲು ನಿರ್ಧರಿಸಿದೆ. ರಾಜ್ಯದ ಹತ್ತು ಪಾಲಿಟೆಕ್ನಿಕ್​ಗಳಲ್ಲಿ ಈ ಲ್ಯಾಂಗ್ವೇಜ್ ಲ್ಯಾಬ್ ತೆರೆಯಲಿದೆ. ಇದಕ್ಕಾಗಿ ಸರ್ಕಾರ 1.75 ಕೋಟಿ ಮಂಜೂರು ಮಾಡಿದ್ದು, ಪ್ರತಿ ಲ್ಯಾಬ್​ಗೂ ತಲಾ 1.75 ಲಕ್ಷ ವಿನಿಯೋಗಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)