ಮುಂಬೈ; ವೇಗವಾಗಿ ಬಂದ ಐಷಾರಾಮಿ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಘಟನೆ ಮುಂಬೈನ ಕರಾವಳಿ ರಸ್ತೆಯಲ್ಲಿ ನಡೆದಿದೆ. ಸದ್ಯ ಕಾರು ಚಾಲಕ ಅಪಘಾತದಲ್ಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಇನ್ನೂ ಈ ವಿಡಿಯೋವನ್ನು ಅಧ್ಯಕ್ಷ ಗೌತಮ್ ಸಿಂಘಾನಿಯಾ ಎಂಬುವವರು X ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ಹರಿಬಿಟ್ಟ ಕೆಲವೇ ನಿಮಿಷಗಳಲ್ಲಿ ಈ ಅಪಘಾತದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗೌರಮ್ ಸಿಂಘಾನಿಯಾ ಅವರು ಮತ್ತೊಂದು ದಿನ, ಮತ್ತೊಂದು ಲ್ಯಾಂಬೋರ್ಗಿನಿ ಅಪಘಾತ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, 52 ವರ್ಷದ ಚಾಲಕ ಅತಿಶ್ ಶಾ, ಸಮುದ್ರ ಬಳಿಯ ರಸ್ತೆಯಿಂದ ದಕ್ಷಿಣ ಮುಂಬೈನ ಕೊಲಾಬಾಗೆಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪಿಟಿಐ ವರದಿ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಮಳೆಯಾಗಿದ್ದರಿಂದ ನೆನೆದ ರಸ್ತೆಗಳಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಚಾಲಕ ತನ್ನ ಕಾರನ್ನು ವೇಗವಾಗಿ ಚಾಲನೆ ಮಾಡಿದ ಪರಿಣಾಮ, ನಿಯಂತ್ರಣ ಕಳೆದುಕೊಂಡ ಬಳಿಕ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ‘ಓಜಿ’ ಸಿನಿಮಾ; 1.30 ಲಕ್ಷ ರೂ. ಕೊಟ್ಟು ಬೆನಿಫಿಟ್ ಶೋ ಖರೀದಿಸಿದ ಅಭಿಮಾನಿ| Pawan Kalyan
(ಏಜೆನ್ಸೀಸ್)
ವಿಡಿಯೋದಲ್ಲಿ ವೇಗವಾಗಿ ಹೋಗುತ್ತಿರುವ ಕೆಂಪು ಲ್ಯಾಂಬೋರ್ಗಿನಿ ಕಾರು, ಡಿವೈಡರ್ಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದಾಗಿದೆ. 4 ರಿಂದ 5 ಕೋಟಿ ಬೆಲೆ ಬಾಳುವ ದುಬಾರಿ ಕಾರು ಇದಾಗಿದ್ದು, ಕಾರಿಗೆ ಏನಾದರೂ ತಾಂತ್ರಿಕ ದೋಷವಿದೆಯೇ ಎಂದು ಪರಿಶೀಲಿಸಲು ವರ್ಲಿ ಪೊಲೀಸರು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಸೂಚಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನೂ ಚಾಲಕನ ವಿರುದ್ಧ ವೇಗದ ಚಾಲನೆಗಾಗಿ ಶಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.