Lalama stands alone in the Rangoli competition 
ನ್ಯೂಸ್

ರಂಗೋಲಿ ಸ್ಪರ್ಧೆಯಲ್ಲಿ ಲಾಲಮ ಒಂಟಿ ಪ್ರಥಮ

ಮಹಾಲಿಂಗಪುರ: ರನ್ನ ವೈಭವ ಹಿನ್ನೆಲೆಯಲ್ಲಿ ಸಮೀಪದ ರನ್ನಬೆಳಗಲಿಯ ಸಿದ್ಧಾರೂಢ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. 15 ವಿದ್ಯಾರ್ಥಿಗಳು 18 ಕಿಲೋ ರಂಗೋಲಿ ಬಳಸಿ ಚಿತ್ರಗಳನ್ನು ಬಿಡಿಸಿದರು. ಸ್ಪರ್ಧೆಯಲ್ಲಿ ಲಾಲಮ ಒಂಟಿ ಪ್ರಥಮ, ಶಿವಗಂಗಾ ಪೂಜಾರಿ ದ್ವಿತೀಯ, ಸುಜಾತ ಹನಗಂಡಿ ತೃತೀಯ ಸ್ಥಾನ ಪಡೆದರು.

ನಿರ್ಣಾಯಕರಾಗಿ ಶಿಕ್ಷಕರಾದ ವೇಮನಗೌಡ ಹೂಡೆದಮನಿ, ಎಂ.ಐ.ಗಾಣಿಗೇರ, ಮಾಯಪ್ಪ ಲೋಕ್ಯಾಗೋಳ ಕಾರ್ಯ ನಿರ್ವಹಿಸಿದರು. ಚಿತ್ರಕಲಾ ಶಿಕ್ಷಕ ಬಾಳಕೃಷ್ಣ ಚೋಪಡೆ ಉಪಸ್ಥಿತರಿದ್ದರು.

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ಕನ್ನಡ ವ್ಯಾಕರಣ ಕಾರ್ಯಗಾರ ನೆರವೇರಿತು.