ಹೊಳೆನರಸೀಪುರ : ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಪಂಚಪಲ ಅಭಿಷೇಕ, ಅರ್ಚನೆ ಹಾಗೂ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ದೇವಾಲಯದ ಆವರಣದಲ್ಲಿರುವ ಶ್ರೀಮತೈ ಗೋದಾದೇವಿ ಅಂಡಾಳ್ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಯಿತು.
ಶ್ರೀ ಸ್ವಾಮಿ ಹಾಗೂ ಗೋದಾದೇವಿಯ ಉತ್ಸವ ಮೂರ್ತಿಗಳ ಪ್ರಾಕಾರೋತ್ಸವ ನಡೆಸಿದ ನಂತರ ಶ್ರೀದೇವಿಯ ಸನ್ನಿಧಿ ಸಮೀಪ ನಿರ್ಮಿಸಿದ ವೈಕುಂಠ ದ್ವಾರದ ಮೇಲೆ ಶ್ರೀಸ್ವಾಮಿಯವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನಡೆಸಿ, ಭಕ್ತರು ವೈಕುಂಠ ದ್ವಾರದಲ್ಲಿ ಸಾಗಲು ಅವಕಾಶ ಕಲ್ಪಿಸಲಾಯಿತು.
ಮೇಲುಕೋಟೆಯ ಮಠದಿಂದ ಆಗಮಿಸಿದ್ದ ಪೂಜ್ಯ ಶ್ರೀ ಶಟಗೊಪ ರಾಮಾನುಜ ಜೀಯರ್ ದಿವ್ಯ ಸಾನ್ನಿಧ್ಯದಲ್ಲಿ ಪೂಜಾ ಕೈಂಕರ್ಯ ಜರಗಿತು.
ಪೂಜಾ ಕಾರ್ಯದಲ್ಲಿ ಹಿರಿಯರಾದ ಸಿ.ಎನ್.ನಾಗಪ್ಪ, ಎಸ್.ಗೋಪಾಲ್, ಶ್ರೀ ಆಂಡಾಳ್ ಸಮಿತಿಯ ಕಿಶೋರ್, ರಮೇಶ್, ಎಂ.ಜೆ.ರವಿಚಂದ್ರ, ನಾಗಚೇತನ್, ಮುಕುಂದ, ಪ್ರವೀಣ್, ವಿಜಯ್ ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.