ನ್ಯೂಸ್

ನಾಪತ್ತೆಯಾಗಿದ್ದ ಯುವತಿ ಶವ ದೊಡ್ಡಪ್ಪನ ಜಮೀನಿನಲ್ಲಿ ಪತ್ತೆ...

ರಾಮನಗರ: ಕಳೆದ ಎರಡು ದಿನಗಳಿಂದಲೂ ನಾಪತ್ತೆಯಾಗಿದ್ದ 19 ವರ್ಷದ ಯುವತಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ. ಆದರೆ ಆಕೆಯ ಶವ ಸಿಕ್ಕ ಜಾಗ ಕುಟುಂಬಸ್ಥರಿಗೆ ಶಾಕ್​ ನೀಡಿದೆ.

ಮಾಗಡಿ ಜಿಲ್ಲೆಯ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೇಮಲತಾ (19) ಮೃತ ಯುವತಿ. ಈಕೆ ಅಕ್ಟೋಬರ್​ 8ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಕುಟುಂಬದವರು ಅ.9ರಂದು ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆದರೆ ಇಂದು ಮನೆಯ ಸಮೀಪವೇ ಇರುವ, ಯುವತಿಯ ದೊಡ್ಡಪ್ಪ ರವೀಂದ್ರ ಕುಮಾರ್​ ಜಮೀನಿನಲ್ಲಿ ಆಕೆಯ ಶವ ಪತ್ತೆಯಾಗಿದೆ. ಯುವತಿಯ ಬಟ್ಟೆಗಳು ಒಂದು ಕಡೆ ಬಿದ್ದಿದ್ದರೆ, ಅವಳ ಮೃತದೇಹ ಇನ್ನೊಂದು ಕಡೆಗೆ ಸಿಕ್ಕಿದೆ. ಜಮೀನಿನ ಮಣ್ಣಿನಡಿಯಲ್ಲಿ ಮುಚ್ಚಿದಂತೆ ಶವ ಸಿಕ್ಕಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು.