ನ್ಯೂಸ್

ಸ್ನೇಹಿತೆ ಮನೆಯಲ್ಲಿ 2 ಲಕ್ಷ ರೂ. ಕದ್ದ ಲೇಡಿ ಡಿಎಸ್​ಪಿ: ವಿಡಿಯೋ ವೈರಲ್​ | DSP

ಭೂಪಾಲ್​: ಮಹಿಳಾ ಡಿಎಸ್​ಪಿ(DSP) ಒಬ್ಬರು ತನ್ನ ಸ್ವಂತ ಸ್ನೇಹಿತೆ ಮನೆಯಲ್ಲಿ 2 ಲಕ್ಷ ರೂ. ಕದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮನೆಯಲ್ಲಿ ಆಳವಡಿಸಿದ್ದ ಸಿಸಿಟಿವಿಯಲ್ಲಿ ಪೊಲೀಸ್​ ದೃಷ್ಕೃತ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ಇನ್ನು ಈ ಪ್ರಕರಣ ಮಧ್ಯಪ್ರದೇಶದ ಭೂಪಾಲ್​ನ ಜಹಾಂಗೀರಾಬಾದ್​ ಪ್ರದೇಶದಲ್ಲಿ ನಡೆದಿದೆ. ಈ ಪ್ರದೇಶದ ಪ್ರಮೀಳಾ ಎಂಬ ಮಹಿಳೆ ತನ್ನ ಕುಟುಂಬದ ಜೊತೆ ವಾಸಿಸುತ್ತಿದ್ದು, ಕಲ್ಪನಾ ರಘುವಂಶಿ ಎಂಬ ಮಹಿಳಾ ಡಿಎಸ್​ಪಿ ಅವರ ಜೊತೆ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು.

ಪ್ರಮೀಳಾ ಪ್ರಕಾರ, ಕೆಲವು ದಿನಗಳ ಹಿಂದೆ, ತನ್ನ ಮಕ್ಕಳ ಶಾಲಾ ಶುಲ್ಕಕ್ಕಾಗಿ ಹಣವನ್ನು ಡ್ರಾ ಮಾಡಿ ಸ್ನಾನಕ್ಕೆ ಹೋಗುವ ಮೊದಲು ಮನೆಯಲ್ಲಿಯೇ ಇಟ್ಟುಕೊಂಡಿದ್ದಳು. ಅವಳು ಹಿಂತಿರುಗಿದಾಗ, ತನ್ನ ಕೋಣೆಯಿಂದ ಹಣ ಮತ್ತು ಮೊಬೈಲ್ ಫೋನ್ ಕಾಣೆಯಾಗಿರುವುದನ್ನು ಅವಳು ಕಂಡುಕೊಂಡಳು. ತಡಮಾಡದೆ, ಪ್ರಮೀಳಾ ಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ತನ್ನ ಡಿಎಸ್ಪಿ ಸ್ನೇಹಿತೆ ಕಲ್ಪನಾ ರಘುವಂಶಿ ಬ್ಯಾಗ್ ಕದಿಯುತ್ತಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.

ನಂತರ ಪ್ರಮೀಳಾ ಪೊಲೀಸ್ ಠಾಣೆಗೆ ಹೋಗಿ ಸಿಸಿಟಿವಿ ದೃಶ್ಯಾವಳಿಗಳ ಸಮೇತ ದೂರು ಸಲ್ಲಿಸಿದರು. ಪೊಲೀಸರು ವೀಡಿಯೊವನ್ನು ಪರಿಶೀಲಿಸಿದಾಗ ಕಲ್ಪನಾ ರಘುವಂಶಿ ನೋಟುಗಳ ಬಂಡಲ್‌ನೊಂದಿಗೆ ನಡೆದಕೊಂಡ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಡಿಎಸ್​ಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಲ್ಪನಾ ರಘುವಂಶಿ ತಲೆ ಮರೆಸಿಕೊಂಡಿದ್ದಾರೆ.(ಏಜೆನ್ಸೀಸ್​)