ನ್ಯೂಸ್

IPS ಡಿ.ರೂಪ vs IAS ರೋಹಿಣಿ ವಾರ್; ಇಬ್ಬರು ಅಧಿಕಾರಿಗಳ ಮಧ್ಯೆ ಡಿ.ಕೆ.ರವಿ ಪತ್ನಿ ಎಂಟ್ರಿ!

ಬೆಂಗಳೂರು: ಜೆಡಿಎಸ್​ ಶಾಸಕ ಸಾರಾ ಮಹೇಶ್​ ಜೊತೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸಂಧಾನ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್​ ಅಧಿಕಾರಿ ರೂಪಾ ಮೌದ್ಗಿಲ್​ ಅವರು ಫೇಸ್​ಬುಕ್​ ಮೂಲಕ ಸಮರ ಸಾರಿದ್ದು, ಪ್ರಶ್ನೆಗಳ ಸುರಿಮಳೆಗೈದಿದ್ದರು. ಬಳಿಕ ರೋಹಿಣಿ ಸಿಂಧೂರಿ ಅವರ ಕೆಲ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿ, ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆಯನ್ನೂ ಕೊಟ್ಟಿದ್ದರು.

ರೂಪ ಮೌದ್ಗಿಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರೋಹಿಣಿ ಸಿಂಧೂರಿ ಅವರಿಗೆ ಆರಂಭದಲ್ಲಿ ನಾನು ಅವರಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಡಿ.ಕೆ.ರವಿ ಆತ್ಮಹತ್ಯೆಯ ವಿಚಾರ ಬಂದಾಗಲೇ ರೋಹಿಣಿ ಸಿಂಧೂರಿ ಎಡವಿದ್ದರು. ಅವತ್ತೇ ನಾನು ಮಾತನಾಡಿದ್ದೆ ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಡಿ.ಕೆ.ರವಿ ಪತ್ನಿ ಕಾಂಗ್ರೆಸ್ ನಾಯಕಿ ಟ್ವಿಟರ್​ನಲ್ಲಿ "Karma will get back to you,sooner or later it surely will" ಎಂದು ಬರೆದುಕೊಂಡಿದ್ದಾರೆ. ತಾನು ಮಾಡಿರುವ ಪಾಪ ತನಗೆ ವಾಪಸ್ಸು ಹಿಂತಿರುಗುತ್ತದೆ. ಅದು ತಕ್ಷಣಕ್ಕೆ ಅಥವಾ ತಡವಾಗಿ ಆಗಬಹುದು. ಪಾಪ ತಟ್ಟುವುದು ಮಾತ್ರ ಖಂಡಿತ ಎಂದು ರೋಹಿಣಿ ಸಿಂಧೂರಿಗೆ ಟಾಂಗ್ ಕೊಟ್ಟಿರುವ ಟ್ವೀಟ್ ಇದೀಗ ಸುಡುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ಕುಸಮಾ ಮಾಡಿರುವ ಟ್ವಿಟ್​ಗೆ ರೂಪ ಮೌದ್ಗಿಲ್ ಪ್ರತಿಕ್ರಿಯಿಸಿ, ಕುಸುಮಾ ನಿಮ್ಮ ನೋವು ನನಗೆ ಅರ್ಥ ಆಗುತ್ತದೆ.
ಒಂದು ಹೆಣ್ಣಾಗಿ ನಿಮ್ಮ ನೋವು ನನಗೆ ಅರ್ಥ ಆಗುತ್ತೆ. ಕೆಲವು ಮಹಿಳೆಯರು ಇನ್ನೂ ಅಸಾಯಕರಾಗಿದ್ದಾರೆ.
ಆದರೆ ಅಂತಿಮವಾಗಿ ಆರೋಪಿ ವಿರುದ್ಧ ನಿಲ್ಲಲೇ ಬೇಕು ಅಲ್ಲವೇ? ಅದು ಹೆಣ್ಣಾದರು ಸರಿ... ಈ ಹಿಂದೆ ಮಾಡಿದಂತಹ ತಪ್ಪುಗಳು ಆಕೆಯಿಂದ ಮರುಕಳಿಬಾರದು ಎಂದು ಹೋರಾಡುತ್ತಿದ್ದೇನೆ ಎಂದು ಟ್ವಿಟರ್​ನಲ್ಲ ಬರೆದಾಡಿಕೊಂಡಿದ್ದಾರೆ.

ಡಿ.ಕೆ ರವಿ ಮೃತಪಟ್ಟಿರುವುದು ಮಾನಸಿಕ ಅಸ್ವಸ್ಥತೆಯಿಂದ ಎಂದು ರೋಹಿಣಿ ಸಿಂಧೂರಿ ಹೇಳಿಕೊಂಡಿದ್ದಾರೆ. ಡಿ.ಕೆ.ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೇ? ನನ್ನ ಪ್ರಶ್ನೆ ಇಷ್ಟೇ... ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್​ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಎಂದು ರೂಪ ಮೌದ್ಗಿಲ್ ಪ್ರಶ್ನಿಸಿದ್ದಾರೆ.