ನ್ಯೂಸ್

ಗಡಿ ಭದ್ರತೆಗೆ ಬಿಳೇಕಲ್ ಸಹೋದರಿಯರು; ಅಪ್ಪನ ಆಸೆ ಈಡೇರಿಸಿದ ಯುವತಿ

ಕುಷ್ಟಗಿ: ತಾಲೂಕಿನ ಬಿಳೇಕಲ್ ಗ್ರಾಮದ ವೀಣಾ ದೇವಿ ಹಾಗೂ ರೇಷ್ಮಾ ಗೌಡರ್ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೇರಿದ್ದಾರೆ. ಒಂದೇ ಕುಟುಂಬದ ಇಬ್ಬರು ಹೆಣ್ಣುಮಕ್ಕಳು ದೇಶ ಸೇವೆಗೆ ತೆರಳಿರುವುದು ವಿಶೇಷ.

ವೀಣಾ ದೇವಿಯ ತಂದೆ ದೇವಪ್ಪ ಮಗನನ್ನು ಸೇನೆಗೆ ಕಳುಹಿಸುವ ಆಸೆ ಹೊಂದ್ದಿರು. ಆದರೆ, ಅಪ್ಪನ ಆಸೆಯನ್ನು ಪುತ್ರಿ ವೀಣಾದೇವಿ ಸಾಕಾರಗೊಳಿಸಿದ್ದಾರೆ. ತಂದೆಯ ಆಸೆ ಈಡೇರಿಸಬೇಕೆಂಬ ಛಲದೊಂದಿಗೆ ಸಿದ್ಧತೆ ನಡೆಸಿ ಗುರಿ ತಲುಪಿದ್ದಾರೆ. ಆದರೆ, ಸೇನೆಗೆ ಸೇರಿರುವುದನ್ನು ನೋಡಲು ತಂದೆಯೇ ಇಲ್ಲ ಎಂಬ ಕೊರಗು ವೀಣಾ ದೇವಿಯದ್ದಾಗಿದೆ.

ದೇವಪ್ಪ ಸಹೋದರ ಮಹೇಶ ಪುತ್ರಿ ರೇಷ್ಮಾ ಕೂಡ ಬಿಎಸ್‌ಎಫ್‌ಗೆ ಸೇರ್ಪಡೆಯಾಗಿದ್ದಾರೆ. ರೇಷ್ಮಾ ಬಾಲ್ಯದಿಂದಲೇ ಸೇನೆ ಸೇರಬೇಕೆಂಬ ಆಸೆ ಹೊಂದಿದ್ದರು. ಕೂಲಿ ಕಾರ್ಮಿಕರಾದ ಮಹೇಶ ಪುತ್ರಿಯನ್ನು ಬಿಎ ಓದಿಸಿದ್ದು, ಸೈನ್ಯ ಸೇರುವ ಕನಸು ಸಾಕಾರಕ್ಕೆ ಶ್ರಮಿಸಿದ್ದಾರೆ.