ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ ಚಿತ್ರ ಖುಷಿ ಇಂದು ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ.
ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದ್ದವು, ಸಧ್ಯ ಪ್ರೇಕ್ಷಕನ ನಿರೀಕ್ಷೆಯನ್ನು ಸಿನಿಮಾ ಪೂರ್ಣಗೊಳಿಸಿದೆಯಾ..? ಇಲ್ಲವಾ..? ಅಂತ ನೋಡೋಣ.
ವಿಜಯ್ ಮತ್ತು ಸ್ಯಾಮ್ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಜನರಿಂದ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಎನ್ನವ ಮಾತು ಕೇಳಿ ಬರುತ್ತಿದೆ. ಮತ್ತೆ ಮತ್ತೆ ಸಿನಿಮಾ ನೋಡಬಹುದು ಅಂತ ಹಲವರು ಹೇಳುತ್ತಿದ್ದಾರೆ.
ವಿಜಯ್ ಮತ್ತು ಸಮಂತಾ ಚೆನ್ನಾಗಿ ನಟಿಸಿದ್ದಾರೆ. ಫಸ್ಟ್ ಹಾಫ್ ಓಕೆ, ದ್ವಿತೀಯಾರ್ಧದಲ್ಲಿ ಎಮೋಷನಲ್ ಸೀನ್ ಗಳು ತುಂಬಾ ಚೆನ್ನಾಗಿವೆ. ಒಳ್ಳೆ ಭಾವನೆಯಿಂದ ಥಿಯೇಟರ್ ನಿಂದ ಹೊರ ಬರುತ್ತೇವೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
ಕೊನೆಯ 30 ನಿಮಿಷಗಳ ಭಾವನಾತ್ಮಕ ದೃಶ್ಯಗಳು ಚಿತ್ರದ ಹೈಲೈಟ್ ಎಂದು ಹೇಳಲಾಗುತ್ತಿದೆ. ಅಲ್ಲದೆ, ವಿಜಯ್ ಮತ್ತು ಸ್ಯಾಮ್ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.