Kushi : ಶಿವ ನಿರ್ವಾಣ ನಿರ್ದೇಶನದಡಿಯಲ್ಲಿ ಮೂಡಿಬಂದ ರೌಡಿಬಾಯ್ ವಿಜಿ ಹಾಗೂ ಸ್ಯಾಮ್ ಅಭಿನಯದ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್ ಆಗಿ ತಕ್ಕಮಟ್ಟಿಗೆ ಸಕ್ಸಸ್ ಕಂಡಿದೆ.
ಬಿಡುಗಡೆಯಾಗಿ ಮೂರನೇ ದಿನಕ್ಕೆ ಥಿಯೇಟರ್‌ನಿಂದ ಮಾಯವಾದ ಈ ಸಿನಿಮಾ ಸದ್ಯ 70 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ಮಾಡಲಾಗಿದೆ.
ಖುಷಿ ಸಿನಿಮಾ ನಿರ್ದೇಶಕರಾದ ಶಿವ ನಿರ್ವಾಣ OTT ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈ ಚಿತ್ರದ OTT ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ವರದಿಯ ಪ್ರಕಾರ, ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಭಾರಿ ಮೊತ್ತವನ್ನು ಪಾವತಿಸಿದೆ ಎನ್ನಲಾಗುತ್ತಿದ್ದು, ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಸೆಪ್ಟೆಂಬರ್ 30 ಅಥವಾ ಅಕ್ಟೋಬರ್ 4 ರಂದು ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.
ಸಖತ್ ರೋಮ್ಯಾಂಟಿಕ್ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ "ಖುಷಿ" ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಜೊತೆಗೆ ಚಿತ್ರದಲ್ಲಿನ ಸಾಂಗ್‌ಗಳು ಸಹ ಸಖತ್ ಹಿಟ್ ಆಗಿವೆ. ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೆ ವಿಜಿ ಸ್ಯಾಮ ಜೋಡಿಯಾಗಿ ನಟಿಸಿದ ಮೊದಲ ಸಿನಿಮಾ ಇದು.
ಇನ್ನು ಇದೇ ವೇಳೆ ಜವಾನ್ ಸಿನಿಮಾ ರಿಲೀಸ್ ಆಗಿದ್ದೇ ಈ ಸಿನಿಮಾ ಓಟಕ್ಕೆ ಬ್ರೇಕ್ ಹಾಕಿದಂತಾಯಿತು. ಸದ್ಯ ಇದೇ ಖುಷಿ ಸಿನಿಮಾ OTT ಅಂಗಳಕ್ಕೂ ಕಾಲಿಟ್ಟಿದೆ.