ಮುಂಬೈ: ಸೋಷಿಯಲ್ ಮೀಡಿಯಾ ಪ್ರಭಾವಿ, ನಟಿ ಕುಶಾ ಕಪಿಲಾ ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗಳಿಂದ ಸುದ್ದಿಯಲ್ಲಿದ್ದರು. ಆಕೆ ಪತಿ ಜೋರಾವರ್ ಸಿಂಗ್ ಅಹ್ಲುವಾಲಿಯಾ ಡಿವೋರ್ಸ್ ಪಡೆದು ಬೇರೆಯಾದರು. ಸಂದರ್ಶನವೊಂದರಲ್ಲಿ, ಈ ಚೆಲುವೆ ಡೇಟಿಂಗ್ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಜನರು ಒಂಟಿಯಾಗಿದ್ದರೆ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ: ಬಾಂಗ್ಲಾ ನೆಂಟರ ಮನೆಗೆ ತೆರಳಿದ್ದ ಭಾರತೀಯ 37ವರ್ಷದ ಬಳಿಕ ತಾಯ್ನಾಡಿಗೆ ಬಂದ! ಷಹಜಹಾನ್ನ ಕಣ್ಣೀರ ಕಥೆಯಿದು..
ನಾನು ಯಾವತ್ತೂ ಡೇಟಿಂಗ್ ಆ್ಯಪ್‌ನಲ್ಲಿಲ್ಲ ಎಂದು ಆಕೆ ಬಹಿರಂಗಪಡಿಸಿದ್ದಾಳೆ. ನನಗೀಗ 30ವರ್ಷ. ಈ ವಯಸ್ಸಿನಲ್ಲಿ ಸ್ನೇಹಿತರನ್ನು ಮಾಡುವುದು ಅತ್ಯಂತ ಕಷ್ಟಕರವಾದ ವಿಷಯ ಈ ಅಪ್ಲಿಕೇಶನ್ ಗಳು ಸಂಸ್ಕೃತಿಯ ಭಾಗವಾಗಿದ್ದರೂ, ನಾನು ಎಂದಿಗೂ ಒಂಟಿಯಾಗಿರಲಿಲ್ಲ. ಹಾಗಾಗಿ ನಾನು ಅಪ್ಲಿಕೇಶನ್‌ಗಳಲ್ಲಿ ಇರಲಿಲ್ಲ ಮತ್ತು ಈಗ ನಾನು ಅದನ್ನು ಮೀರಿರುವುದಾಗಿ ಭಾವಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕುಶಾ ಮುಂದಿನ ಹಾಸ್ಯ ಸರಣಿ ಲೈಫ್ ಹಿಲ್ ಗಯಿಯಲ್ಲಿ ದಿವ್ಯೆಂದು ಶರ್ಮಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯು ಉತ್ತರಾಖಂಡದಲ್ಲಿ ನಡೆಯುತ್ತಿದ್ದು, ತಮ್ಮ ಅಜ್ಜನ ಆಸ್ತಿಯನ್ನು ಪಡೆದುಕೊಳ್ಳಲು ಹೋರಾಡುವ ಇಬ್ಬರು ಒಡಹುಟ್ಟಿದವರ ಸುತ್ತ ಸುತ್ತುತ್ತದೆ.