ನ್ಯೂಸ್

21ನೇ ಶತಮಾನದಲ್ಲಿ ಡಿಜಿಟಲ್​ ಸಾಕ್ಷರತೆ ಮುಖ್ಯ; ಚಂದ್ರು

Haveri - Kariyappa Aralikatti

ರಾಣೆಬೆನ್ನೂರ: ಪ್ರಸ್ತುತ 21ನೇ ಶತಮಾನದಲ್ಲಿ ಬಹು ಮುಖ್ಯವಾಗಿ ಸಮುದಾಯದ ಜನರು ಅದರಲ್ಲೂ ಸ್ವ ಸಹಾಯ ಸಂದ ಮಹಿಳಾ ಸದಸ್ಯರು ಡಿಜಿಟಲ್​ ಸಾಕ್ಷರತೆ ಪಡೆದುಕೊಳ್ಳುವುದು ಬಹಳ ಅವಶ್ಯಕವಾಗಿದೆ ಎಂದು ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ನೋಡಲ್​ ಅಧಿಕಾರಿ ಚಂದ್ರು ಎಚ್​.ಎಂ. ಹೇಳಿದರು.

ಜಿಪಂ, ತಾಪಂ ಹಾಗೂ ಶಿಕ್ಷಣ ಪೌಂಡೇಷನ್​ ವತಿಯಿಂದ ತಾಲೂಕಿನ ಕುಪ್ಪೇಲೂರ ಗ್ರಾಪಂನಲ್ಲಿ ಸೋಮವಾರ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗಾಗಿ ಏರ್ಪಡಿಸಿದ್ದ ಡಿಜಿಟಲ್​ ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನದಲ್ಲಿ ಪ್ರತಿಯೊಂದು ದೈನಂದಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿರುವುದು ಮೊಬೈಲ್​ ಫೋನ್​ ಮುಖಾಂತರ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್​ ಸಾಕ್ಷರತೆಯನ್ನು ಪಡೆದುಕೊಂಡರೆ ಮುಂದಿನ ಸರ್ಕಾರದ ಎಲ್ಲ ಯೋಜನೆಗಳನ್ನ ತಮ್ಮ ಅಂಗೈಯಲ್ಲಿ ಮಾಹಿತಿ ಪಡೆದುಕೊಳ್ಳಲು ಸಹಾಯಕವಾಗುವುದು.

ಆದ್ದರಿಂದ ಫೋನ್​ನಲ್ಲಿ ನಂಬರ್​ ಸೇವ್​ ಮಾಡುವುದು. ಸಂದೇಶಗಳನ್ನು ನೋಡುವುದು, ಫೋನ್​ ಸುರಕ್ಷತೆಯನ್ನು ಯಾವ ರೀತಿಯಾಗಿ ಮಾಡಿಕೊಳ್ಳುವುದು. ಮಕ್ಕಳಿಂದ ಫೋನ್​ಅನ್ನು ಯಾವ ರೀತಿಯಾಗಿ ಪೇರೆಂಟ್​ ಕಂಟ್ರೋಲ್​ ಮುಖಾಂತರ ನಿರ್ವಹಣೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯೆ ರೇಖಾ ಮಾದೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ರಾಮಣ್ಣ ಸಿರಿಗೇರಿ, ಶಿಲ್ಪಾ ಮಳೆಪ್ಪನವರ, ಕುಸುಮಾ ಮಣಕೂರ, ಎಂಬಿಕೆ ಒಕ್ಕೂಟದ ರೇಣುಕಾ ದಾಸರ, ಅರಿವು ಕೇಂದ್ರದ ಮೇಲ್ವಿಚಾರಕಿ ಯಲ್ಲಮ್ಮ ಕಿತ್ತೂರು ಮತ್ತಿತರರು ಉಪಸ್ಥಿತರಿದ್ದರು.