ನ್ಯೂಸ್

ಹರಿದ್ವಾರ ಕುಂಭಮೇಳ ಮೂರೂವರೆ ತಿಂಗಳ ಬದಲು 48 ದಿನಗಳಿಗೆ ಸೀಮಿತ

ಹರಿದ್ವಾರ : ಹರಿದ್ವಾರದಲ್ಲಿ ನಡೆಯಲಿರುವ ಕುಂಭ ಮೇಳ ಮೂರೂವರೆ ತಿಂಗಳ ಬದಲು ಕೇವಲ 48 ದಿನ ಮಾತ್ರ ನಡೆಯಲಿದೆ. ವಾಡಿಕೆಯಂತೆ ಹೇಳುವುದಾದರೆ ಮೂರೂವರೆ ತಿಂಗಳ ಕುಂಭ ಮೇಳದ ಅಧಿಸೂಚನೆಯನ್ನು ಸರ್ಕಾರ ಜನವರಿ 1ರಂದು ಪ್ರಕಟಿಸಬೇಕು. ಆದರೆ, ಕೋವಿಡ್ 19 ಸೋಂಕಿನ ಕಾರಣ ಮೂರೂವರೆ ತಿಂಗಳ ಕುಂಭ ಮೇಳವನ್ನು 48 ದಿನಕ್ಕೆ ಮೊಟಕುಗೊಳಿಸಿರುವ ಕಾರಣ ಅಧಿಸೂಚನೆ ಫೆಬ್ರವರಿಯಲ್ಲಿ ಪ್ರಕಟವಾಗಲಿದೆ ಎಂದು ಉತ್ತರಾಖಂಡ ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್ ತಿಳಿಸಿದ್ದಾರೆ.

ಕೋವಿಡ್ ಸಂಕಷ್ಟದ ಕಾರಣ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಾರ್ಚ್​-ಏಪ್ರಿಲ್​ನಲ್ಲಿ ಕುಂಭ ಮೇಳ ನಡೆಯಲಿದೆ. ಭಕ್ತಾದಿಗಳು ಶಾಹಿಸ್ನಾನವನ್ನು ಈ 48 ದಿನಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಮಾಡಬಹುದಾಗಿದೆ. ಕುಂಭ ಮೇಳ 2021 ಆಯೋಜಿಸುವುದಕ್ಕೆ ಬೇಕಾದ ಅನುದಾನವನ್ನು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಬಿಡುಗಡೆಗೆ ಸೂಚನೆ ನೀಡಿದ್ದಾರೆ.

ನಿಗಾ ವ್ಯವಸ್ಥೆಗೆ 17.34 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಇದರಲ್ಲಿ ಮೊದಲ ಕಂತು 6.94 ಕೋಟಿ ರೂಪಾಯಿ ಶೀಘ್ರವೇ ಬಿಡುಗಡೆಯಾಗಲಿದೆ. ತಾತ್ಕಾಲಿಕವಾಗಿ 1,000 ಬೆಡ್​ ನ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವುದಕ್ಕೆ 15.46 ಕೋಟಿ ರೂಪಾಯಿ ಮೀಸಲಿಟ್ಟಿರುವ ಸರ್ಕಾರ, ಮೊದಲ ಕಂತಿನಲ್ಲಿ 6.18 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ ಎಂದು ಸಚಿವ ಕೌಶಿಕ್ ತಿಳಿಸಿದ್ದಾರೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..