ಬಿಗ್‌ ಬಾಸ್‌ ಮನೆಯಿಂದ ಕುಮಾರಿ ಎಲಿಮಿನೇಟ್ 
ನ್ಯೂಸ್

ಬಿಗ್‌ ಬಾಸ್‌ನಿಂದ ಕುಮಾರಿ ಔಟ್: ಅಗ್ನಿಪರೀಕ್ಷೆಯಿಂದ ದೊಡ್ಮನೆವರೆಗಿನ ಜರ್ನಿ ಮುಕ್ತಾಯ? | BBK 13 Elimination

Bigg Boss Kannada 13: ಬಿಗ್‌ ಬಾಸ್ ಕನ್ನಡ ಸೀಸನ್ 13ರ ಆಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇದರ ನಡುವೆ 8ನೇ ವಾರದ ವೀಕೆಂಡ್‌ನಲ್ಲಿ ದೊಡ್ಮನೆಯಿಂದ ದೊಡ್ಡ ಎಲಿಮಿನೇಷನ್ ನಡೆದಿದೆ. ತಮ್ಮ ಮುಗ್ಧ ಮಾತು ಮತ್ತು ನಡವಳಿಕೆಯಿಂದಲೇ ಸುದ್ದಿಯಲ್ಲಿದ್ದ ವೈಲ್ಡ್‌ಕಾರ್ಡ್ ಸ್ಪರ್ಧಿ ಕುಮಾರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರುವ ಸಾಧ್ಯತೆ ಇದೆ.

ಕುಮಾರಿ ಬಿಗ್ ಬಾಸ್ ಮುಖ್ಯ ಮನೆಗೆ ಬರುವ ಮುನ್ನ ನಡೆದ 'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋನಲ್ಲಿ ಕಾಮನ್ ಮ್ಯಾನ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಮುಗ್ಧವಾಗಿ ಮಾತನಾಡುತ್ತಾ ಎಲ್ಲರ ಮನಸ್ಸು ಗೆದ್ದಿದ್ದ ಇವರು, ಶೋನಲ್ಲಿ 'ಸ್ಟಾರ್ ಕಂಟೆಂಡರ್' ಆಗಿಯೂ ಆಯ್ಕೆಯಾಗಿದ್ದರು.

ದುಬೈನಲ್ಲಿ ಕೆಲಸದ ಆಫರ್

ಇನ್ನು, ಮೊದಲ ಟಾಸ್ಕ್‌ನಲ್ಲಿ ಪೂರ್ಣಿಮಾ ವಿರುದ್ಧ ಸೋತ ಮೇಲೆ ಕುಮಾರಿಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಯ್ತು. ವೈದ್ಯರ ಸಲಹೆಯಂತೆ ಶೋನಿಂದ ಅರ್ಧದಲ್ಲೇ ಹೊರಬರಬೇಕಾಯ್ತು. ಅವರ ಪರಿಸ್ಥಿತಿ ನೋಡಿ ಬೇಸರಗೊಂಡ ವಾಹಿನಿಯವರು ಮತ್ತು ತೀರ್ಪುಗಾರರು, 5 ಲಕ್ಷ ರೂಪಾಯಿ ಆರ್ಥಿಕ ನೆರವು ಜತೆಗೆ ದುಬೈನಲ್ಲಿ ಕೆಲಸದ ಆಫರ್ ಕೂಡ ನೀಡಿದ್ದರು.

ದಸರಾ ವೇಳೆ ವೈಲ್ಡ್ ಕಾರ್ಡ್ ಎಂಟ್ರಿ

ಅಗ್ನಿಪರೀಕ್ಷೆಯಿಂದ ಹೊರಹೋಗಿದ್ದ ಕುಮಾರಿಗೆ ಬಿಗ್ ಬಾಸ್ ಮತ್ತೆ ದೊಡ್ಡ ಅವಕಾಶ ಕೊಡ್ತು. ದಸರಾ ಹಬ್ಬದ ಸಡಗರದ ವೇಳೆ 4ನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ನೇರವಾಗಿ ಬಿಗ್ ಬಾಸ್ ಮುಖ್ಯ ಮನೆಗೆ ಎಂಟ್ರಿ ಕೊಟ್ಟರು.

ಬಟ್ಟೆ ವಿಚಾರಕ್ಕೆ ಟ್ರೋಲ್

ದೊಡ್ಮನೆಗೆ ಬಂದ ಮೇಲೂ ಕುಮಾರಿ ಸಾಕಷ್ಟು ವಿವಾದ ಎದುರಿಸಿದರು. ಮನೆಗೆ ಬಂದ ದಿನದಿಂದಲೂ ಒಂದೇ ತರಹದ ಸ್ವೆಟರ್ ಅಥವಾ ಬಟ್ಟೆ ಹಾಕಿಕೊಳ್ಳುತ್ತಿದ್ದರು. ಇದನ್ನು ನೋಡಿದ ಸೋಶಿಯಲ್ ಮೀಡಿಯಾ ಮಂದಿ, ‘ರೀಲ್ಸ್ ಮಾಡುವಾಗ ವಿಧವಿಧದ ಬಟ್ಟೆ ಹಾಕುವ ಕುಮಾರಿ, ಬಿಗ್ ಬಾಸ್‌ನಲ್ಲಿ ಸಿಂಪತಿ ಗಿಟ್ಟಿಸಿಕೊಳ್ಳೋಕೆ ಹೀಗೆ ಮಾಡ್ತಿದ್ದಾರೆ’ ಅಂತ ಸಖತ್ ಟ್ರೋಲ್ ಮಾಡಿದ್ದರು.

ಆದರೆ ಮನೆಯೊಳಗೆ ಕುಮಾರಿ ತಮ್ಮ ಧೈರ್ಯ ತೋರಿಸಲು ಹಿಂಜರಿಯಲಿಲ್ಲ. ಟಾಸ್ಕ್ ಅಂತ ಬಂದಾಗ ಕಾವ್ಯ ಅವರ ಕಳಪೆ ಆಟ ಮತ್ತು ಸಾಮಾನ್ಯ ಜ್ಞಾನದ ಕೊರತೆಯನ್ನು ನೇರವಾಗಿಯೇ ಪ್ರಶ್ನೆ ಮಾಡಿ, ಅವರಿಗೆ 'ಕಳಪೆ' ಪಟ್ಟ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಇದನ್ನು ಓದಿ: ರಾಂಪುರ ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಎಸ್​ಪಿ ನಾಯಕ ಅಜಂ ಖಾನ್​ರನ್ನು ಮತ್ತೆ ವಶಕ್ಕೆ ಪಡೆದ ಇಡಿ: ಅಖಿಲೇಶ್ ಯಾದವ್ ಆಕ್ರೋಶ | Azam Khan

8ನೇ ವಾರಕ್ಕೆ ಮುಗಿಯಿತು ಜರ್ನಿ

8ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಕುಮಾರಿ ಡೇಂಜರ್ ಝೋನ್‌ನಲ್ಲಿದ್ದರು. ಈ ವೀಕೆಂಡ್ ಎಪಿಸೋಡ್‌ನಲ್ಲಿ ಕಡಿಮೆ ವೋಟ್ ಪಡೆದ ಕುಮಾರಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಏಳುಬೀಳು ಮತ್ತು ವಿವಾದಗಳಿಂದ ಕೂಡಿದ್ದ ಕುಮಾರಿಯ ಬಿಗ್ ಬಾಸ್ ಜರ್ನಿ ಮುಗಿದೆ ಎನ್ನಲಾಗುತ್ತಿದೆ.